On Sun., May 28, 2017, at the Concluding Ceremony of the 3-days’ Residential Dance Workshop (NACH-NRITYA-DANCE), conducted by Nach Sobhann, in association with Mandd Sobhann; the muhurat of ‘KONKANI DARSHAN’ – 1½ hour song and dance presentation, depicting the history and cultural variety of Konkani, was launched.

Eminent trainers trained the 32 participants in the various forms of dancing. Shri Elton Mascarenhas (Bollywood), Shri Rami Nair (Samba & Bachata), Vidushi Vani Rajagopal (Bharatnatyam) and Eric Ozario (Konkani dance forms).

Shri Pramod Alva – Dancer, Dance Director and Choreographer of ‘India’s Got Talent’ fame conducted the muhurat by displaying the teaser prepared by Shri Ashith Pinto of Dubai. He has been assigned with the important task of directing the 20 dances in ‘Konkani Darshan’.

As this show involves live dancing by the Nach Sobhann artistes in the foreground, with the story unfolding through a movie displayed in the background. Shri Harry Fernandes, successful Movie Director of ‘Noshibacho Khell’ and ‘Sophiya’, and many other Bhojpuri and Marathi movies, has been assigned the work of the movie section. ‘Sangeet Guru’ Shri Joel Pereira is working on the storyline. He will also be in charge of the musical elements assisted by ‘Vishwa Konkani Kala Ratn’ Eric Ozario. The Background Music will be handled by Shri Alwyn Fernandes, Guitar Maestro.

This big budget show will take 6 months to produce. The first show is scheduled at Kalaangann, on Jan. 7, at the 193rd Monthly Theatre, after which the show will go on the roads, presenting shows in India and abroad.

---------------------

 

 

 

 

 

‘ಕೊಂಕ್ಣಿ ದರ್ಶನ್’ ಹಾಕಾ ಚಾಲನ್
-----------------

ಆಯ್ತಾರಾ, ಮಾಯ್ 28, 2017ವೆರ್, ನಾಚ್ ಸೊಭಾಣಾನ್, ಮಾಂಡ್ ಸೊಭಾಣಾ ಸಾಂಗಾತಾ ಮೆಳುನ್ ಆಸಾ ಕೆಲ್ಲ್ಯಾ 3 ದಿಸಾಂಚ್ಯಾ ವಸ್ತೆ ನಾಚ್ ಕಾರ್ಯಾಗಾರ್ ಹಾಚ್ಯಾ ಸಮಾರೋಪ್ ಕಾರ್ಯಾ ವೆಳಿಂ ಕೊಂಕ್ಣೆಚೊ ಇತಿಹಾಸ್ ಆನಿ ವಿವಿಧ್ ಸಾಂಸ್ಕೃತಿಕ್ ವಿವಿಧತಾ ದಾಕೊವ್ನ್ ದಿಂವ್ಚೆಂ ‘ಕೊಂಕ್ಣಿ ದರ್ಶನ್’ ಮ್ಹಣ್ಲ್ಯಾ 1½ ಘಂಟ್ಯಾಂಚ್ಯಾ ಪದಾಂ ಆನಿ ನಾಚ್ ಪ್ರದರ್ಶನ್, ಹಾಕಾ ಚಾಲನ್ ದಿಲೆಂ.

ಪ್ರಖ್ಯಾತ್ ತರ್ಬೆತೆದಾರಾಂನಿ 32 ನಾಚ್ಪಿ-ನಾಚ್ಪಿಣ್ಯಾಂಕ್ ವಿವಿಧ್ ನಾಚ್ ಪ್ರಕಾರಾಂತ್ ತರ್ಬೆತಿ ದಿಲಿ. ಶ್ರೀ ಎಲ್ಟನ್ ಮಸ್ಕರೇನ್ಹಸ್ (ಬೊಲಿವುಡ್), ಶ್ರೀ ರಾಮಿ ನಾಯರ್ (ಸಾಂಬಾ ಆನಿ ಬಚಾತಾ), ವಿದುಶಿ ವಾಣಿ ರಾಜಗೋಪಾಲ್ (ಭರತನಾಟ್ಯಮ್) ಆನಿ ಎರಿಕ್ ಒಝೇರಿಯೊ (ಕೊಂಕ್ಣಿ ನಾಚ್ ಪ್ರಕಾರ್).

‘ಇಂಡಿಯಾಸ್ ಗೊಟ್ ಟ್ಯಾಲೆಂಟ್’ ಖ್ಯಾತಿಚೊ ನಾಚ್ಪಿ ಆನಿ ನಾಚ್ ನಿರ್ದೇಶಕ್ ಶ್ರೀ ಪ್ರಮೋದ್ ಆಳ್ವಾ ಹಾಣೆಂ ದುಬಾಯ್ಚ್ಯಾ ಶ್ರೀ ಆಶಿತ್ ಪಿಂಟೊ ಹಾಣೆಂ ತಯಾರ್ ಕೆಲ್ಲೆಂ ಟೀಸರ್ ಪಡ್ದ್ಯಾರ್ ಪ್ರದರ್ಶಿತ್ ಕರ್ನ್ ‘ಕೊಂಕ್ಣಿ ದರ್ಶನ್’ ಹಾಚೆಂ ಮುಹೂರ್ತ್ ಚಲೊವ್ನ್ ವೆಲೆಂ. ‘ಕೊಂಕ್ಣಿ ದರ್ಶನ್’ ಹಾಂತ್ಲೆ 20 ನಾಚ್ ನಿರ್ದೇಶನ್ ಕರ್ಚಿ ಜವಾಬ್ದಾರಿ ತಾಕಾ ದಿಲ್ಯಾ.

‘ಕೊಂಕ್ಣಿ ದರ್ಶನ್’ ಹಾಚ್ಯಾ ಪ್ರದರ್ಶನಾಂತ್ ನಾಚ್ ಸೊಭಾಣ್ ಪಂಗ್ಡಾಚೆ ವಾಂಗ್ಡಿ ನಾಚ್ ಪ್ರದರ್ಶನ್ ಕರ್ತಲೆ ಆನಿ ಪಾಟ್ಲ್ಯಾನ್ ಪಡ್ದ್ಯಾರ್ ಹಾಚಿ ಕಾಣಿ ಚಲ್‍ಚಿತ್ರಾ ರುಪಾರ್ ಪ್ರದರ್ಶಿತ್ ಜಾತಲಿ. ‘ನಶಿಬಾಚೊ ಖೆಳ್’ ಆನಿ ‘ಸೊಫಿಯಾ’ ಚಲ್‍ಚಿತ್ರಾಚೊ ಯಶಸ್ವಿ ನಿರ್ದೇಶಕ್ ಶ್ರೀ ಹ್ಯಾರಿ ಫೆರ್ನಾಂಡಿಸ್ ಹಾಕಾ ಚಲ್‍ಚಿತ್ರಾಚಿ ಜವಾಬ್ದಾರಿ ದಿಲ್ಯಾ. ‘ಸಂಗೀತ್ ಗುರು’ ಜೊಯೆಲ್ ಪಿರೇರಾ ಕಾಣಿಯೆಚೆರ್ ಕಾಮ್ ಕರ್ತಾ, ಸಾಂಗಾತಾಚ್ ಸಂಗಿತಾಚ್ಯೊ ಸಂಗ್ತಿಯಿ ತೊ ‘ವಿಶ್ವ್ ಕೊಂಕ್ಣಿ ಕಲಾ ರತ್ನ್’ ಎರಿಕ್ ಒಝೇರಿಯೊ ಹಾಚ್ಯಾ ಸಾಂಗಾತಾ ಸಾಂಬಾಳ್ತಲೊ. ಪಾಟ್‍ಭುಂಯಾಂತ್ಲೆಂ ಸಂಗೀತ್, ಗಿತಾರ್ ಮಾಂತ್ರಿಕ್ ಶ್ರೀ ಒಲ್ವಿನ್ ಫೆರ್ನಾಂಡಿಸ್ ಸಾಂಬಾಳ್ತಾ.

ವ್ಹಡ್ಲ್ಯಾ ಐವಜಾಚೆಂ ಹೆಂ ಪ್ರದರ್ಶನ್ ಉಬೆಂ ಕರುಂಕ್ 6 ಮ್ಹಯ್ನೆ ಲಾಗ್ತಲೆ. ಪಯ್ಲೆಂ ಪ್ರದರ್ಶನ್ – ಜನೆರ್ 7, 2017ವೆರ್, ಕಲಾಂಗಣಾಂತ್, 193ವ್ಯೆ ಮ್ಹಯ್ನ್ಯಾಳಿ ಮಾಂಚಿಯೆಂತ್ ಜಾತಲೆಂ, ಆನಿ ತ್ಯಾ ಉಪ್ರಾಂತ್ ದೆಶಾಂತ್ ಆನಿ ವಿದೆಶಾಂತ್ ಹಾಚಿಂ ಪ್ರದರ್ಶನಾಂ ಚಲ್ತಲಿಂ.

--------------

 

 

 

 

 

‘ಕೊಂಕಣಿ ದರ್ಶನ್’ ಕಾರ್ಯಕ್ಕೆ ಚಾಲನೆ
-----------------

ಆದಿತ್ಯವಾರ, ಮೇ 28, 2017ರಂದು, ನಾಚ್ ಸೊಭಾಣ್, ಮಾಂಡ್ ಸೊಭಾಣ್ ಸಂಘಟನೆಯೊಂದಿಗೆ ಜೊತೆಗೂಡಿ ಆಯೋಜಿಸಿದ 3 ದಿನಗಳ ವಸತಿ ನೃತ್ಯ ಕಾರ್ಯಗಾರದ ಸಮಾರೋಪ್ ಕಾರ್ಯದಲ್ಲಿ ಕೊಂಕಣಿಯ ಇತಿಹಾಸ ಹಾಗೂ ವಿವಿಧ ಸಾಂಸ್ಕೃತಿಕ ವೈವಿಧ್ಯತೆಯನ್ನು ಬಿಂಬಿಸುವ ‘ಕೊಂಕಣಿ ದರ್ಶನ್’ ಎಂಬ 1½ ಗಂಟೆಗಳ ಪದ್ಯ ಹಾಗೂ ನೃತ್ಯ ಪ್ರದರ್ಶನ ಕಾರ್ಯಕ್ಕೆ ಚಾಲನೆ ನೀಡಿದರು.

ಪ್ರಖ್ಯಾತ ತರಬೇತುದಾರರು ಕಾರ್ಯಗಾರದಲ್ಲಿ ಭಾಗವಹಿಸಿದ 32 ನೃತ್ಯಗಾರರನ್ನು ವಿವಿಧ ನೃತ್ಯ ಪ್ರಕಾರಗಳಲ್ಲಿ ತರಬೇತಿ ನೀಡಿದರು. ಶ್ರೀ ಎಲ್ಟನ್ ಮಸ್ಕರೇನ್ಹಸ್ (ಬೊಲಿವುಡ್), ಶ್ರೀ ರಾಮಿ ನಾಯರ್ (ಸಾಂಬಾ ಹಾಗೂ ಬಚಾತಾ), ವಿದುಶಿ ವಾಣಿ ರಾಜಗೋಪಾಲ್ (ಭರತನಾಟ್ಯಮ್) ಹಾಗೂ ಎರಿಕ್ ಒಝೇರಿಯೊ (ಕೊಂಕಣಿ ನೃತ್ಯ ಪ್ರಕಾರಗಳು).

‘ಇಂಡಿಯಾಸ್ ಗೊಟ್ ಟ್ಯಾಲೆಂಟ್’ ಖ್ಯಾತಿಯ ನೃತ್ಯ ನಿರ್ದೇಶಕ ಶ್ರೀ ಪ್ರಮೋದ್ ಆಳ್ವಾ ಇವರು ಶ್ರೀ ಆಶಿತ್ ಪಿಂಟೊ, ದುಬಾಯ್ ತಯಾರಿಸಿದ ಟೀಸರ್ ಪ್ರದರ್ಶಿಸಿ ‘ಕೊಂಕಣಿ ದರ್ಶನ್’ ಇದರ ಮುಹೂರ್ತ ನೆರವೇರಿಸಿದರು. ಈ ಕಾರ್ಯದಲ್ಲಿರುವ 20 ನೃತ್ಯಗಳನ್ನು ನಿರ್ದೇಶಿಸುವ ಜವಾಬ್ದಾರಿಯನ್ನು ಇವರಿಗೆ ನೀಡಲಾಗಿದೆ.

‘ಕೊಂಕಣಿ ದರ್ಶನ್’ ಕಾರ್ಯದಲ್ಲಿ ನಾಚ್ ಸೊಭಾಣ್ ನೃತ್ಯ ಪ್ರದರ್ಶಿಸುವರು ಹಾಗೆಯೇ ಕಥೆಯನ್ನು ಹಿಂದಿನ ಪರದೆಯಲ್ಲಿ ಚಲನಚಿತ್ರದ ಮೂಲಕ ಪ್ರದರ್ಶಿಸಲಾಗುವುದು. ‘ನಶಿಬಾಚೊ ಖೆಳ್’ ಹಾಗೂ ‘ಸೊಫಿಯಾ’ ಚಲನಚಿತ್ರದ ಯಶಸ್ವಿ ನಿರ್ದೇಶಕರಾದ ಶ್ರೀ ಹ್ಯಾರಿ ಫೆರ್ನಾಂಡಿಸ್ ಚಲನಚಿತ್ರದ ಜವಾಬ್ದಾರಿ ತೆಗೆದುಕೊಂಡಿದ್ದಾರೆ ಹಾಗೂ ಕಥೆಯನ್ನು ‘ಸಂಗೀತ್ ಗುರು’ ಜೊಯೆಲ್ ಪಿರೇರಾ ಬರೆಯಲ್ಲಿದ್ದಾರೆ ಹಾಗೆಯೇ ಸಂಗೀತಕ್ಕೆ ಸಂಬಂಧಿಸಿದ ಸಂಗತಿಗಳನ್ನು ‘ವಿಶ್ವ್ ಕೊಂಕ್ಣಿ ಕಲಾ ರತ್ನ್’ ಎರಿಕ್ ಒಝೇರಿಯೊ ಇವರೊಂದಿಗೆ ನಿರ್ವಹಿಸುವರು. ಹಿನ್ನೆಲೆ ಸಂಗೀತದ ಜವಾಬ್ದಾರಿಯನ್ನು ಗಿತಾರ್ ಮಾಂತ್ರಿಕ ಶ್ರೀ ಒಲ್ವಿನ್ ಫೆರ್ನಾಂಡಿಸ್ ಇವರಿಗೆ ನೀಡಲಾಗಿದೆ.

ದೊಡ್ಡ ಬಜೆಟ್‍ನ ಈ ಪ್ರದರ್ಶನ ತಯಾರಿಸಲು 6 ತಿಂಗಳ ಅವಧಿಯನ್ನು ಮೀಸಲಿರಿಸಲಾಗಿದೆ. ಪ್ರಥಮ ಪ್ರದರ್ಶನ – ಜನವರಿ 7, 2017ರಂದು, ಕಲಾಂಗಣದಲ್ಲಿ ನಡೆಯುವ 193ನೇ ಮ್ಹಯ್ನ್ಯಾಳಿ ಮಾಂಚಿ ಕಾರ್ಯಕ್ರಮದಲ್ಲಿ ನಡೆಯುವುದು. ಆ ನಂತರ ದೇಶ ವಿದೇಶಗಳಲ್ಲಿ ಇದರ ಪ್ರದರ್ಶನ ನಡೆಯುವುದು.

--------------

 

 

 

 

 

Home | About | NewsSitemap | Contact

Copyright ©2015 www.manddsobhann.org. Powered by

Mandd Sobhann
Kalaangann,
Makale, Shaktinagar,
Mangalore - 575016
Email: [email protected]
Mobile:8105226626