ಅಂತರಾಷ್ಟ್ರೀಯ್ ಮಟ್ಟಾರ್ ಪರ್ಜಳುನ್ ಆಸ್ಚೊ ಯುವ ಗಾವ್ಪಿ ಇಶಾನ್ ಫೆರ್ನಾಂಡಿಸ್ ಹಾಣೆಂ ಕಲಾಂಗಣಾಂತ್ 22-12-24 ವೆರ್ ಟ್ರಾನ್ಸೆಂಡಿಗ್ ಬೌಂಡರೀಸ್ – 3 ಸಂಗೀತ್ ಕಾರ್ಯೆಂ ಸಾದರ್ ಕೆಲೆಂ. ಬಂಬಾರ, ಅರೇಬಿಕ್, ಸ್ವೀಡಿಶ್, ಇಟಾಲಿಯನ್, ಪೋರ್ಚುಗೀಸ್, ಕೊಂಕ್ಣಿ, ಸ್ಪಾನಿಶ್, ಹಿಂದೂಸ್ತಾನಿ, ಇಂಗ್ಲೀಶ್, ಕಜಕ್, ತುಳು ಆನಿ ಅರ್ಮೇನಿಯನ್ ಅಶೆಂ 12 ಭಾಸಾಂಚಿಂ ಮಧುರ್ ಪದಾಂ ಗಾವ್ನ್ ಮನಾಂ ಧಲಯ್ಲಿಂ. ಹರ್ಯೆಕಾ ಪದಾಚ್ಯೆ ಸುರ್ವೆರ್ ದೇಶ್ – ಭಾಶೆವಿಶಿಂ, ಸಂಸ್ಕೃತಿ ವಿಶಿಂ, ಪದಾಂನಿ ಆಟಾಪ್ಲಲ್ಯಾ ಭೊಗ್ಣಾಂವಿಶಿಂ ವಿವರಾವ್ನ್, ಪದಾಂ ಆಯ್ಕೊಪ್ಯಾಂಕ್ ತಿ ಸಮ್ಜುಂಕ್ ಗರ್ಜೆಚೊ ಭೊಂವಾರ್ ತಯಾರ್ ಕರ್ನ್ ದಿಲೊ.

ಸಂಗೀತ್ ಶೆತಾಂತ್ಲೆ ಸಾಧಕ್ ಜೆರೊಮ್ ಕುವೆಲ್ಲೊ (ಬಾಸ್ ಗಿಟಾರ್), ಸಂಜಯ್ ರೊಡ್ರಿಗಸ್ (ಕೀ ಬೋರ್ಡ್), ಸಂಜೀತ್ ರೊಡ್ರಿಗಸ್ (ಡ್ರಮ್ಸ್) ಜೊಸ್ವಿನ್ ಡಿಕುನ್ಹಾ (ಲೀಡ್ ಗಿಟಾರ್) ಆನಿ ಜೀವನ್ ಸಿದ್ದಿ (ಗುಮಟ್) ಹಾಣಿಂ ಸಂಗೀತಾಂತ್ ಸಹಕಾರ್ ದಿಲೊ. ಮಾಂಡ್ ಸೊಭಾಣ್ ಗುರ್ಕಾರ್ ಎರಿಕ್ ಒಝೇರಿಯೊನ್ ಪ್ರಸ್ತಾವನ್ ದಿಲೆಂ ತರ್, ಅಧ್ಯಕ್ಷ್ ಲುವಿ ಜೆ. ಪಿಂಟೊನ್ ಕಲಾಕಾರಾಂಕ್ ಮಾನ್ ಭೆಟಯ್ಲೊ.

ಕೆನಡಾಚ್ಯಾ ಬ್ರಿಟಿಷ್ ಕೊಲಂಬಿಯಾ ವಿಶ್ವವಿದ್ಯಾಲಯಾ ಥಾವ್ನ್ ಇಂಜಿನಿಯರಿಂಗ್ ಪದ್ವಿ ಜೊಡ್ಲಲ್ಯಾ ಇಶಾನ್ ಫೆರ್ನಾಂಡಿಸಾಕ್ ಇತಿಹಾಸ್, ಭಾಸ್, ಕಲಾ ಅಶೆಂ ಬಹುಮುಖಿ ಆಸಕ್ತ್ ಆಸಾ. ಸಂಗೀತಾಂತ್ ಸಾಧನ್ ಕರುಂಕ್ ಸಾಧ್ಯ್ ಆಸ್ಚ್ಯಾ ಅಪಾರ್ ಸಾಧ್ಯತಾಯೆಂವಿಶಿಂ ಮಾಹೆತ್ ಜೊಡುನ್ ಆಸಾ. ಆಪ್ಲೊ ಬಾಪುಯ್ ಗಿಟಾರ್ ಮಾಯಿಸ್ಟ್ರೊ ಬಿರುದಾಂಕಿತ್ ಆಲ್ವಿನ್ ಫೆರ್ನಾಂಡಿಸ್ ಹಾಚೆ ಥಾವ್ನ್ ಪ್ರೇರಣ್ ಜೊಡ್ಲಾಂ ತರೀ ಗಿಟಾರಾಂತ್ ವೆವೆಗ್ಳೆ ಪ್ರಯೋಗ್ ಕರುನ್ ಆಪ್ಲಿಚ್ ವಾಟ್ ರುತಾ ಕರುನ್ ಆಸಾ. ಯು.ಎ.ಇ.ಚೆಂ ಪ್ರಖ್ಯಾತ್ ಸಂಗೀತ್ ಬ್ಯಾಂಡ್ `ಒಲಿವ್ ಹೇಝ್’ ಹಾಚೊ ಸಾಂದೊ ತೊ. ಸ್ವಖುಶೆನ್ ಸಬಾರ್ ಭಾಸೊ ಶಿಕುನ್, ತ್ಯಾ ಭಾಸಾಂಚ್ಯಾ ಸಂಗೀತಾಚಿ ನಾಡ್ ಪಾರ್ಕುನ್ ಲೊಕಾಮೆರೆನ್ ಪಾವೊಂವ್ಕ್ ತೊ ವಾವುರ್ತಾ.

ಹ್ಯಾ ಆದಿಂ ಮಂಗ್ಳುರ್ ಆನಿ ಪಾಂಬೂರಾಂತ್ ಟ್ರಾನ್ಸೆಂಡಿಗ್ ಬೌಂಡರೀಸ್ ಶಿಂಕ್ಳೆಚಿಂ ದೋನ್ ಕಾರ್ಯಿಂ ಚಲ್ಲ್ಯಾಂತ್.


Kalaangann: Music that Transcended Boundaries

Young singer Eshan Fernandes, who is shining at the International level, performed the Transcending Boundaries 3 concert on 22-12-24 at Kalaangann. He sang 12 Songs in 12 languages including Bambara, Persian, Swedish, Italian, Hindustani, Portuguese, Konkani, Spanish, Kazakh, English, Tulu and Armenian. Before each song, he explained the culture of the Language and the Country it represents along with the emotions woven in the song, allowing the listeners to feel the soul of the song.

He was accompanied by Mangalore’s own Musical geniuses including Jerome Coelho (Bass Guitar), Sanjay Rodrigues (Keyboard), Sanjeet Rodrigues (Drums), Joswin Dcunha (Lead Guitar) and Jeevan Siddi (Gumo’tt and Backing Vocals). Mandd Sobhann Gurkar Eric Ozario gave an introduction to the Concert and President Louis J Pinto honored the artistes.

A graduate in Materials Engineering from the University of British Columbia in Canada, Eshan Fernandes is a multifaceted young man with interests in history, linguistics, art and more. He’s an explorer of the many possibilities in music. Though inspired by his father Alwyn Fernandes, a Guitar Maestro, Eshan has created his unique style by experimenting with the guitar. He is a member of UAE’s popular band Olive Haze. Having learnt many languages with his own interest and understanding the pulse of the music in those languages, he is working to take them to the masses.

Previously, two concerts of the Transcending Boundaries series have been performed in Mangalore and Pamboor.


ಕಲಾಂಗಣದಲ್ಲಿ ಗಡಿಗಳನ್ನು ಮೀರಿದ ಸಂಗೀತ ಸುಧೆ

ಅಂತರಾಷ್ಟ್ರೀಯ ಮಟ್ಟದಲ್ಲಿ ಮಿಂಚುತ್ತಿರುವ ಯುವ ಗಾಯಕ ಇಶಾನ್ ಫೆರ್ನಾಂಡಿಸ್ ಕಲಾಂಗಣದಲ್ಲಿ 22-12-24 ರಂದು ಟ್ರಾನ್ಸೆಂಡಿಗ್ ಬೌಂಡರೀಸ್ – 3 ಸಂಗೀತ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಬಂಬಾರ, ಅರೇಬಿಕ್, ಸ್ವೀಡಿಶ್, ಇಟಾಲಿಯನ್, ಪೋರ್ಚುಗೀಸ್, ಕೊಂಕಣಿ, ಸ್ಪಾನಿಶ್, ಹಿಂದೂಸ್ತಾನಿ, ಇಂಗ್ಲೀಶ್, ಕಜಕ್, ತುಳು ಹಾಗೂ ಅರ್ಮೇನಿಯನ್ ಹೀಗೆ 12 ಭಾಷೆಗಳ ಸುಮಧುರ ಹಾಡುಗಳನ್ನು ಹಾಡಿ ಮನರಂಜಿಸಿದರು. ಪ್ರತಿ ಹಾಡುಗಳ ಮಧ್ಯೆ ದೇಶ-ಭಾಷೆಗಳ ಸಂಸ್ಕೃತಿ ಬಗ್ಗೆ, ಹಾಡುಗಳು ಒಳಗೊಂಡ ಭಾವಗಳ ಬಗ್ಗೆ ವಿವರಿಸಿ, ಕೇಳುಗರಿಗೆ ಹಾಡುಗಳನ್ನು ಅರ್ಥೈಸಲು ಅನುವು ಮಾಡಿ ಕೊಟ್ಟರು.

ಸಂಗೀತ ಸಾಧಕರಾದ ಜೆರೊಮ್ ಕುವೆಲ್ಲೊ (ಬಾಸ್ ಗಿಟಾರ್), ಸಂಜಯ್ ರೊಡ್ರಿಗಸ್ (ಕೀ ಬೋರ್ಡ್), ಸಂಜೀತ್ ರೊಡ್ರಿಗಸ್ (ಡ್ರಮ್ಸ್) ಜೊಸ್ವಿನ್ ಡಿಕುನ್ಹಾ (ಲೀಡ್ ಗಿಟಾರ್) ಹಾಗೂ ಜೀವನ್ ಸಿದ್ದಿ (ಪಕ್ಕ ವಾದ್ಯ) ಇವರುಗಳು ಸಂಗೀತದಲ್ಲಿ ಸಹಕರಿಸಿದರು. ಮಾಂಡ್ ಸೊಭಾಣ್ ಗುರಿಕಾರ ಎರಿಕ್ ಒಝೇರಿಯೊ ಪ್ರಸ್ತಾವನೆಗೈದು, ಅಧ್ಯಕ್ಷ ಲುವಿ ಜೆ. ಪಿಂಟೊ ಕಲಾವಿದರನ್ನು ಗೌರವಿಸಿದರು.

ಕೆನಡಾದ ಬ್ರಿಟಿಷ್ ಕೊಲಂಬಿಯಾ ವಿಶ್ವವಿದ್ಯಾಲಯದಿಂದ ಇಂಜಿನಿಯರಿಂಗ್ ಪದವಿ ಪಡೆದ ಇಶಾನ್ ಫೆರ್ನಾಂಡಿಸ್ ಚರಿತ್ರೆ, ಭಾಷಾಶಾಸ್ತ್ರ, ಕಲೆ ಹೀಗೆ ಬಹುಮುಖಿ ಆಸಕ್ತಿಯ ಯುವಕ. ಸಂಗೀತದಲ್ಲಿ ಸಾಧನೆಗೈಯಬಹುದಾದ ಅನಂತ ಸಾಧ್ಯತೆಗಳ ಬಗ್ಗೆ ಒಲವುಳ್ಳವರು. ತನ್ನ ತಂದೆ ಗಿಟಾರ್ ಮಾಯೆಸ್ಟ್ರೋ ಬಿರುದಾಂಕಿತ ಆಲ್ವಿನ್ ಫೆರ್ನಾಂಡಿಸ್ ಇವರಿಂದ ಪ್ರೇರಣೆ ಪಡೆದರೂ, ಗಿಟಾರಿನಲ್ಲಿ ಹಲವು ವಿಭಿನ್ನ ಪ್ರಯೋಗಗಳನ್ನು ಮಾಡಿ ಭಿನ್ನ ಜಾಡಿನಲ್ಲಿ ಸಾಗುತ್ತಿದ್ದಾರೆ. ಯು.ಎ.ಇ.ಯ ಪ್ರಖ್ಯಾತ ಬ್ಯಾಂಡ್ `ಒಲಿವ್ ಹೇಝ್’ ಇದರ ಸದಸ್ಯರಾಗಿದ್ದಾರೆ. ಸ್ವ ಆಸಕ್ತಿಯಿಂದ ಹಲವು ಭಾಷೆಗಳನ್ನು ಕಲಿತು, ಆ ಭಾಷೆಗಳ ಸಂಗೀತದ ನಾಡಿ ಮಿಡಿತವನ್ನು ಅರಿತು ಅವನ್ನು ಜನರಿಗೆ ತಲುಪಿಸುವ ಕೆಲಸ ಮಾಡುತ್ತಿದ್ದಾರೆ.

ಈ ಹಿಂದೆ ಮಂಗಳೂರು ಹಾಗೂ ಪಾಂಬೂರಿನಲ್ಲಿ ಟ್ರಾನ್ಸೆಂಡಿಗ್ ಬೌಂಡರೀಸ್ ಸರಣಿಯ ಎರಡು ಕಾರ್ಯಕ್ರಮಗಳು ನಡೆದಿವೆ.

Home | About | NewsSitemap | Contact

Copyright ©2015 www.manddsobhann.org. Powered by

Mandd Sobhann
Kalaangann,
Makale, Shaktinagar,
Mangalore - 575016
Email: [email protected]
Mobile:8105226626