ಕಾರ್ಯಕ್ರಮ ನಿಮಿತ್ತ ಮಂಗಳೂರಿಗೆ ಆಗಮಿಸಿದ ಕರ್ನಾಟಕ ಶಿಲ್ಪಕಲಾ ಅಕಾಡೆಮಿಯ ಅಧ್ಯಕ್ಷರಾದ ಎಂ ಸಿ ರಮೇಶ್ ಇವರು ಶಕ್ತಿನಗರದ ಮಾಂಡ್ ಸೊಭಾಣ್ ಸಂಸ್ಥೆಯ ಕಲಾಂಗಣಕ್ಕೆ ಭೇಟಿ ನೀಡಿದರು. ಬಯಲು ರಂಗ ಮಂದಿರ, ಸಭಾಂಗಣ ಇತ್ಯಾದಿಗಳಲ್ಲಿ ನಿರಂತರ ನಡೆಯುವ ಸಾಂಸ್ಕೃತಿಕ, ಅಧ್ಯಯನಾತ್ಮಕ ಚಟುವಟಿಕೆಗಳ ಬಗ್ಗೆ ಕಾರ್ಯ ಚಟುವಟಿಕೆಗಳ ಮಾಹಿತಿ ಪಡೆದರು. ವಿವಿಧ ಕಲಾ ಶಿಲ್ಪಗಳು, ಗೋಡೆಗಳಲ್ಲಿನ ಉಬ್ಬು ಚಿತ್ರಗಳನ್ನು ವೀಕ್ಷಿಸಿ ಮೆಚ್ಚುಗೆ ಸೂಚಿಸಿದರು.

ಕಲಾಂಗಣದ ಹೊರಭಾಗದಲ್ಲಿ ಏಕತಾ ಗೋಡೆಯಲ್ಲಿರುವ ಕೊಂಕಣಿಯ ವಿವಿಧ ಸಾಂಸ್ಕೃತಿಕ ಪ್ರಕಾರಗಳನ್ನು ಸೂಚಿಸುವ 15 ಸಿಮೆಂಟ್ ಶಿಲ್ಪಗಳನ್ನು ಶಿಲ್ಪಕಲಾ ಅಕಾಡೆಮಿಯ ಸಹಯೋಗದಲ್ಲಿ 2016ರಲ್ಲಿ ರಚಿಸಲಾಗಿದೆ.

ಶಿಲ್ಪಕಲಾ ಅಕಾಡೆಮಿಯ ಸದಸ್ಯರಾದ ಕುಮಾರ್ ವೈ, ಅಕಾಡೆಮಿ ಸಿಬ್ಬಂದಿ ಎಚ್ ಮಹೇಂದ್ರ ಹಾಗೂ ಮಾಂಡ್ ಸೊಭಾಣ್ ಸಾರ್ವಜನಿಕ ಸಂಪರ್ಕಾಧಿಕಾರಿ ವಿಕ್ಟರ್ ಮತಾಯಸ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Home | About | NewsSitemap | Contact

Copyright ©2015 www.manddsobhann.org. Powered by

Mandd Sobhann
Kalaangann,
Makale, Shaktinagar,
Mangalore - 575016
Email: [email protected]
Mobile:8105226626