ಸಂಸಾರಾಂತ್ಲೆಂ ಪ್ರಮುಖ್ ಕೊಂಕ್ಣಿ ಸಾಂಸ್ಕೃತಿಕ್ ಸಂಘಟನ್ – ಮಾಂಡ್ ಸೊಭಾಣ್, 2009 ಇಸ್ವೆ ಥಾವ್ನ್ - ಸಂಗೀತ್ ತಾಲೆಂತಾಂಕ್ ವಳ್ಕುನ್, ಪೆÇ್ರೀತ್ಸಾವ್ ದೀಂವ್ಕ್ ಆನಿ ಮಾನ್ ಕರ್ಚ್ಯಾ ಉದ್ದೆಶಾನ್, ವರ್ಸಾನ್ ವರ್ಸ್ ಕೊಂಕ್ಣಿಂತ್ಲೆಂ ಘನಾದಿಕ್ ಸಂಗೀತ್ ಪುರಸ್ಕಾರ್ – ಜಾಗತಿಕ್ ಕೊಂಕ್ಣಿ ಸಂಗೀತ್ ಪುರಸ್ಕಾರ್ - ದೀವ್ನ್ ಆಯ್ಲಾ.

7ವೊ ಜಾಗತಿಕ್ ಕೊಂಕ್ಣಿ ಸಂಗೀತ್ ಪುರಸ್ಕಾರ್ ಪ್ರದಾನ್ ಕಾರ್ಯೆಂ, ಆಯ್ತಾರಾ, ದಶೆಂಬ್ರ್ 13, 2015ವೆರ್, ಕಲಾಂಗಣಾಂತ್, ದಬಾಜಾನ್ ಚಲ್ಲೆಂ. 6 ವಿಭಾಗಾಂಚ್ಯಾ ಉಂಚ್ಲ್ಯಾ 3 ಸ್ಪರ್ಧಿಕಾಂಕ್ ಮಾನ್ ಕೆಲೊ ಆನಿ ಹರ್ ವಿಭಾಗಾಚ್ಯಾ ವಿಜೇತಾಂಕ್ ಘೋಷಿತ್ ಕರ್ನ್, ತಾಂಕಾಂ - ರು. 25,000/- ನಗದ್, ಫುಲಾಂ ತುರೊ, ಬಿರುದ್ ಆನಿ ಯಾದಿಸ್ತಿಕಾ ದೀವ್ನ್ – ಮಾನ್ ಕೆಲೊ. ವಿಜೇತ್ ಹೆ ಪರಿಂ ಆಸಾತ್ –
1.    ಶ್ರೇಷ್ಟ್ ಗಾವ್ಪಿಣ್ 2014: ಅರ್ಚನಾ ಖಾಂದೆಪಾರ್ಕರ್ - ಪದ್: ಘಜûಲ್ – ಆಲ್ಬಮ್: ವೊಂಟಾಂ ವಯ್ಲಿಂ ಗಿತಾಂ
2.    ಶ್ರೇಷ್ಟ್ ಗಾವ್ಪಿ 2014: ಕೆ. ನಿತಿನ್ - ಪದ್: ಸಪ್ಣೆಲಾಂ – ಆಲ್ಬಮ್: ಯಾದ್
3.    ಶ್ರೇಷ್ಟ್ ಸಂಗೀತ್ ರಚ್ನಾರ್ 2014: ರೋಶನ್ ಡಿಸೋಜ - ಪದ್: ಸಪ್ಣೆಲಾಂ – ಆಲ್ಬಮ್: ಯಾದ್
4.    ಶ್ರೇಷ್ಟ್ ಗೀತ್ ರಚ್ನಾರ್ 2014: ವಿಲ್ಸನ್ ಸಿಕ್ವೇರಾ - ಪದ್: ಥೆಂಬೆ ಥೆಂಬೆ ಪಾವ್ಸಾ – ಆಲ್ಬಮ್: ಪಯ್ಲೊ ಮೋಗ್
5.    ಶ್ರೇಷ್ಟ್ ಸಂಗೀತ್ ಸಜಯ್ಣಾರ್ 2014: ಕ್ಯಾಜಿಟನ್ ಡಾಯಸ್ - ಪದ್: ದೆವಾಕ್ ಶಿಂಪ್ಲೆಂ – ಆಲ್ಬಮ್: ಹಲೋ ದೆವಾ
6.    ಶ್ರೇಷ್ಟ್ ಸಂಗೀತ್ ಆಲ್ಬಮ್ 2014: ಅನಿತಾ ಡಿಸೋಜ, ಬೆಳಾ (ಮದರ್ ಮೇರಿ ಕ್ರಿಯೇಶನ್ಸ್) – ಆಲ್ಬಮ್: ಯಾದ್

 

 

 

 

 

 

 

 

 

 

 


ಮುಖೆಲ್ ಸಯ್ರಿಣ್, ಇಂಡಿಪೆÇಪ್ ರಾಣಿ ಆನಿ ಬೊಲಿವುಡ್ ಗಾವ್ಪಿಣ್ ಹೇಮಾ ಸರ್‍ದೇಸಾಯಿ ಹಿಣೆಂ ವಿಜೇತಾಂಕ್ ಪುರಸ್ಕಾರ್ ಪ್ರದಾನ್ ಕೆಲೊ. ಕಾರ್ಯೆಂ ಮಾಂಡುನ್ ಹಾಡ್‍ಲ್ಲ್ಯಾ ರಿತಿಕ್ ತಿಣೆಂ ಹೊಗ್ಳಿಕ್ ಉಚಾರ್ಲಿ ಆನಿ ಹ್ಯಾ ಕಾರ್ಯಾಂತ್ ಆಪ್ಣಾಕ್ ಭಾಗಿದಾರ್ ಕೆಲ್ಲ್ಯಾಕ್ ತಿಣೆಂ ಆಪೆÇ್ಲ ಸಂತೊಸ್ ಉಚಾರ್ಲೊ. ವಿಜೇತಾಂಕ್ ಪರ್ಬಿಂ ಪಾಟೊವ್ನ್, ಮಾಂಡ್ ಸೊಭಾಣಾನ್ ಕೊಂಕ್ಣಿ ಜಿವಾಳ್ ದವ್ರುಂಕ್ ಕರ್ಚ್ಯಾ ವಾವ್ರಾಕ್ ತಿಣೆಂ ಶಾಭಾಸ್ಕಿ ಪಾಟಯ್ಲಿ. ಮಾಂಡ್ ಸೊಭಾಣಾನ್ ಕಲಾಕಾರಾಂಕ್ ದಿಂವ್ಚೊ ಮಾನ್ ಪಳೆವ್ನ್ ತಿ ಖುಶಿ ಜಾಲಿ ಆನಿ ತಿಣೆಂ ಮಾಂಡ್ ಸೊಭಾಣಾಕ್ ಸಲಾಮ್ ಕೆಲೊ. ಉಪ್ರಾಂತ್, ಆಪ್ಲ್ಯಾ ಮಧುರ್ ತಾಳ್ಯಾನ್ ತಿಣೆಂ 3 ಪದಾಂ ಸಾದರ್ ಕೆಲಿಂ – ‘ಕುಕು ರುಕು ಕುಕು’, ‘ದಮಾದಮ್ ಮಸ್ತ್ ಕಲಂದರ್’ ಆನಿ ‘ಉಂದ್ರಾ ಮ್ಹಜ್ಯಾ ಮಾಮಾ’.

‘ಫಾದು’ ರಾಣಿ ಸೋನಿಯಾ ಶಿರ್ಸಾಟ್, ಗೊಂಯ್, ಹಿಣೆಂ 5 ಪದಾಂ ಸಾದರ್ ಕೆಲಿಂ – ಏಕ್ ‘ಫಾದು’, ಏಕ್ ಮಂಗ್ಳುರಿ ಕೊಂಕ್ಣಿ ಪದ್ ಆನಿ 3 ಗೊಂಯ್ಚಿಂ ಪದಾಂ. ನಾಚ್ ಸೊಭಾಣಾನ್ ಆಪ್ಲ್ಯಾ ನಾಚಾ ದ್ವಾರಿಂ ಲೊಕಾಚಿಂ ಮನಾಂ ಪಿಶ್ಯಾರ್ ಘಾಲಿ, ತಶೆಂಚ್ ಸುಮೇಳ್ ಕೊಂಕ್ಣಿ ಗಾಯಾನ್ ಮಂಡಳಿನ್ 2 ಜಮ್ಯಾ ಪದಾಂ ಸಾದರ್ ಕರ್ನ್, ಲೊಕಾಚಿ ಶಾಭಾಸ್ಕಿ ಆಪ್ಣಾಯ್ಲಿ. ಹ್ಯಾ ಸಂದರ್ಭಾರ್, ವರಯ್ಣಾರಾಂಕ್, ಪೆÇೀಶಕಾಂಕ್ ಆನಿ ಕಾರ್ಯಾಂತ್ ವಾವ್ರ್ ಕೆಲ್ಲ್ಯಾ ಸರ್ವಾಂಕ್ ಮಾನ್ ಕೆಲೊ.

ಸಗ್ಳೆಂ ಕಾರ್ಯೆಂ ದಾಯ್ಜಿವರ್ಲ್ಡ್ ಹಾಚೆರ್ ವೆಬ್‍ಕಾಸ್ಟ್ ಜಾಲೆಂ ಆನಿ ಲೊಕಾಕ್ ಸಂಗೀತ್ ಆನಿ ನಾಚಾಚೆಂ ಗಡ್ದ್ ಜೆವಣ್ ಮೆಳ್ಳೆಂ. ‘ಸೋದ್-4’ ರಾಣಿ ಕೊಗುಳ್ ಜ್ಯಾಕ್ಲಿನ್ ಫೆರ್ನಾಂಡಿಸ್ ಆನಿ ಮಾಂಡ್ ಸೊಭಾಣ್ ಉಪಾಧ್ಯಕ್ಷ್ ಅರುಣ್ ರಾಜ್ ಲುದ್ರಿಗ್ ಹಾಣಿಂ ಕಾರ್ಯೆಂ ನಿರ್ವಾಹಣ್ ಕೆಲೆಂ.  

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 



 

ಹೇಮಾ ಸರ್‍ದೇಸಾಯಿ ಇವರಿಂದ 7ನೇ ಜಾಗತಿಕ ಕೊಂಕಣಿ ಸಂಗೀತ ಪುರಸ್ಕಾರ ಪ್ರದಾನ

ವಿಶ್ವದ ಪ್ರಮುಖ ಕೊಂಕಣಿ ಸಾಂಸ್ಕೃತಿಕ ಸಂಘಟಣೆ – ಮಾಂಡ್ ಸೊಭಾಣ್, 2009ರಿಂದ - ಸಂಗೀತ ಪ್ರತಿಭೆಗಳನ್ನು ಗುರುತಿಸಿ, ಪೆÇ್ರೀತ್ಸಾಹಿಸಿ, ಸನ್ಮಾನಿಸುವ ಉದ್ದೇಶದಿಂದ, ಪ್ರತಿ ವರುಷ, ಕೊಂಕಣಿಯ ಅತೀ ಶ್ರೇಷ್ಠ ಸಂಗೀತ ಪುರಸ್ಕಾರ – ಜಾಗತಿಕ ಕೊಂಕಣಿ ಸಂಗೀತ ಪುರಸ್ಕಾರ - ಪ್ರತಿ ವರುಷ, ನೀಡುತ್ತಾ ಬಂದಿದೆ.

7ನೇ ಜಾಗತಿಕ ಕೊಂಕಣಿ ಸಂಗೀತ ಪುರಸ್ಕಾರ ಪ್ರದಾನ ಕಾರ್ಯಕ್ರಮ, ಆದಿತ್ಯವಾರ, ಡಿಸೆಂಬರ್ 13, 2015ರಂದು, ಕಲಾಂಗಣದಲ್ಲಿ, ಅದ್ದೂರಿಯಾಗಿ ಜರುಗಿತು. 6 ವಿಭಾಗಗಳ ಶ್ರೇಷ್ಠ 3 ಸ್ಪರ್ಧಿಕರನ್ನು ಸನ್ಮಾನಿಸಲಾಯಿತು. ಅಂತೆಯೇ, ಪ್ರತಿ ವಿಭಾಗದ ವಿಜೇತರನ್ನು ಘೋಷಿಸಿ, ಅವರಿಗೆ – ರು. 25,000/- ನಗದು, ಹೂಗುಚ್ಛ, ಬಿರುದು ಹಾಗೂ ಟ್ರೋಫಿ ನೀಡಿ, ಸನ್ಮಾನಿಸಲಾಯಿತು. ವಿಜೇತರು -
1.    ಶ್ರೇಷ್ಠ ಗಾಯಕಿ 2014: ಅರ್ಚನಾ ಖಾಂದೆಪಾರ್ಕರ್ - ಪದ್ಯ: ಘಜûಲ್ – ಆ್ಯಲ್ಬಮ್: ವೊಂಟಾಂ ವಯ್ಲಿಂ ಗಿತಾಂ
2.    ಶ್ರೇಷ್ಠ ಗಾಯಕ 2014: ಕೆ. ನಿತಿನ್ - ಪದ್ಯ: ಸಪ್ಣೆಲಾಂ – ಆ್ಯಲ್ಬಮ್: ಯಾದ್
3.    ಶ್ರೇಷ್ಠ ಸಂಗೀತ ರಚನಾಕಾರ 2014: ರೋಶನ್ ಡಿಸೋಜ - ಪದ್ಯ: ಸಪ್ಣೆಲಾಂ – ಆ್ಯಲ್ಬಮ್: ಯಾದ್
4.    ಶ್ರೇಷ್ಠ ಹಾಡು ಬರಹಗಾರ 2014: ವಿಲ್ಸನ್ ಸಿಕ್ವೇರಾ - ಪದ್ಯ: ಥೆಂಬೆ ಥೆಂಬೆ ಪಾವ್ಸಾ – ಆ್ಯಲ್ಬಮ್: ಪಯ್ಲೊ ಮೋಗ್
5.    ಶ್ರೇಷ್ಠ ಸಂಗೀತ ಸಂಯೋಜಕ 2014: ಕ್ಯಾಜಿಟನ್ ಡಾಯಸ್ - ಪದ್ಯ: ದೆವಾಕ್ ಶಿಂಪ್ಲೆಂ – ಆ್ಯಲ್ಬಮ್: ಹಲೋ ದೆವಾ
6.    ಶ್ರೇಷ್ಠ ಸಂಗೀತ ಆ್ಯಲ್ಬಮ್ 2014: ಅನಿತಾ ಡಿಸೋಜ, ಬೆಳಾ (ಮದರ್ ಮೇರಿ ಕ್ರಿಯೇಶನ್ಸ್) – ಆ್ಯಲ್ಬಮ್: ಯಾದ್

ಮುಖ್ಯ ಅತಿಥಿ, ಇಂಡಿಪೆÇಪ್ ರಾಣಿ ಹಾಗೂ ಬೊಲಿವುಡ್ ಗಾಯಕಿ ಹೇಮಾ ಸರ್‍ದೇಸಾಯಿ ಇವರು ವಿಜೇತರಿಗೆ ಪುರಸ್ಕಾರ ಪ್ರದಾನ ಮಾಡಿದರು. ಈ ಅತ್ಯುತ್ತಮ ಕಾರ್ಯಕ್ರಮದಲ್ಲಿ ತಮ್ಮನ್ನು ಆಮಂತ್ರಿಸಿದಕ್ಕಾಗಿ ಅವರು ಕೃತಜ್ಞತೆ ಸಲ್ಲಿಸಿದರು ಹಾಗೂ ಕಾರ್ಯಕ್ರಮ ಆಯೋಜಿಸಿದ ರೀತಿಯನ್ನು ಶ್ಲಾಘಿಸಿದರು. ವಿಜೇತರನ್ನು ಅಭಿನಂದಿಸಿ, ಮಾಂಡ್ ಸೊಭಾಣ್ ಕೊಂಕಣಿಗಾಗಿ ಮಾಡುತ್ತಿರುವ ಕೆಲಸಕ್ಕಾಗಿ ಹಾಗೂ ಅವರು ಕಲಾಕಾರರಿಗೆ ನೀಡುವ ಗೌರವಕ್ಕಾಗಿ ಸಂಸ್ಥೆಯನ್ನು ಅಭಿನಂದಿಸಿದರು. ನಂತರ, ಅವರು 3 ಪದ್ಯಗಳನ್ನು ಹಾಡಿದರು - ‘ಕುಕು ರುಕು ಕುಕು’, ‘ದಮಾದಮ್ ಮಸ್ತ್ ಕಲಂದರ್’ ಹಾಗೂ ‘ಉಂದ್ರಾ ಮ್ಹಜ್ಯಾ ಮಾಮಾ’.

‘ಫಾದು’ ರಾಣಿ ಸೋನಿಯಾ ಶಿರ್ಸಾಟ್, ಗೋವಾ, ಇವರು 5 ಪದ್ಯಗಳನ್ನು ಸಾದರಪಡಿಸಿದರು – ಒಂದು ‘ಫಾದು’, ಒಂದು ಮಂಗಳೂರಿ ಕೊಂಕಣಿ ಪದ್ಯ ಹಾಗೂ 3 ಗೋವಾದ ಪದ್ಯಗಳು. ನಾಚ್ ಸೊಭಾಣ್ ತಮ್ಮ ನೃತ್ಯ ಪ್ರದರ್ಶನದಿಂದ ಜನರ ಮನಸ್ಸು ಗೆದ್ದಿತು. ಅಂತೆಯೇ, ಸುಮೇಳ್ ಕೊಂಕಣಿ ಗಾಯನ ಮಂಡಳಿ 2 ಸಮೂಹ ಗಾಯನ ಪ್ರದರ್ಶಿಸಿ, ಜನರ ಹೊಗಳಿಕೆಗೆ ಪಾತ್ರರಾದರು. ಈ ಸಂದರ್ಭದಲ್ಲಿ, ತೀರ್ಪುದಾರರನ್ನು, ಪೆÇೀಷಕರನ್ನು ಹಾಗೂ ಕಾರ್ಯಕ್ರಮದ ಯಶಸ್ಸಿಗಾಗಿ ದುಡಿದವರನ್ನು ಸನ್ಮಾನಿಸಲಾಯಿತು. 

ಇಡೀ ಕಾರ್ಯಕ್ರಮ ದಾಯ್ಜಿವರ್ಲ್ಡ್‍ನಲ್ಲಿ ನೇರ ವೆಬ್‍ಕಾಸ್ಟ್ ಮಾಡಲಾಗಿತ್ತು. ‘ಸೋದ್-4’ ರಾಣಿ ಕೊಗುಳ್ ಜ್ಯಾಕ್ಲಿನ್ ಫೆರ್ನಾಂಡಿಸ್ ಹಾಗೂ ಮಾಂಡ್ ಸೊಭಾಣ್ ಉಪಾಧ್ಯಕ್ಷ ಅರುಣ್ ರಾಜ್ ರೊಡ್ರಿಗಸ್ ಇವರು ಕಾರ್ಯಕ್ರಮ ನಿರೂಪಿಸಿದರು

 

7th GLOBAL KONKANI MUSIC AWARDS PRESENTED BY HEMA SARDESAI

World’s premier Konkani Cultural Organisation, Mandd Sobhann, has been presenting the most prestigious Music Awards in Konkani – the Global Konkani Music Awards – to recognize, encourage and honour talents, so that Konkani Music may flourish globally, every year, since 2009.

The grand Ceremony of the 7th Global Konkani Music Awards was held on Sun., Dec. 13, 2015, at Kalaangann, Mangalore. Top-3 Nominees of all 6 categories were honoured and the winners were declared and awarded with Rs. 25,000/- each, a bouquet, title and a trophy. The winners are as follows –
1.    Best Singer Female-2014: Archana Khandeparkar for the song ‘Ghazal’ from the Album ‘Ottam Vo’ilim Gitam’.
2.    Best Singer Male-2014: K. Nithin for the song ‘So’pnnelam’ from the Album ‘Yaad’.
3.    Best Music Composer-2014: Roshan D’Souza Angelore for the song ‘So’pnnelam’ from the Album ‘Yaad’.
4.    Best Lyricist-2014: Wilson Sequeira for the song ‘Thembe Thembe Pavsa’ from the Album ‘Poilo Moag’
5.    Best Music Arranger-2014: Cajetan Dias for the song ‘Devak Shimplem’ from Album ‘Hello Deva’
6.    Best Music Album-2014: Anitha D’Souza, Bela (Mother Mary Creations) for the Album ‘Yaad’.

The Chief Guest, internationally acclaimed Queen of Indipop and Bollywood Singer, Ms. Hema Sardesai presented the Awards to the winners. She praised the organizers for the way the Ceremony was organized. She was happy to be a part of the Ceremony and said that every aspect of it was beautiful – the music, the dance, the audience, the ambience and all the arrangements. She congratulated the winners and applauded Mandd Sobhann for its efforts in keeping Konkani alive. She also requested everyone to buy original CDs and encourage artistes. She saluted Mandd Sobhann for the respect it gave artistes. The audience was captured by Hema’s melodious voice, with the rendition of ‘Ku ku ru ku kuku’, ‘Dama Dam Mast Kalandar’ and ‘Undra Mhojya Mama’.

‘Fado’ Queen Sonia Shirsat from Goa, entertained the audience with her melodious singing, by presenting a ‘fado’ song, a Mangalorean Konkani number and 3 Goan songs. Nach Sobhann presented dances on various Konkani numbers and Sumell the Konkani Singing Club of Mandd Sobhann presented 2 group songs on the occasion. The judges, sponsors and all those who worked for the success of the programme were honoured on this occasion.

The entire event was webcast live on Daijiworld and the audience witnessed a festival of music and dance. Soad-4 ‘Ranni Kogull’ Jacqueline Fernandes and Mandd Sobhann Vice-President Arun Raj Rodrigues compered the programme.

Latest News

Home | About | NewsSitemap | Contact

Copyright ©2015 www.manddsobhann.org. Powered by

Mandd Sobhann
Kalaangann,
Makale, Shaktinagar,
Mangalore - 575016
Email: [email protected]
Mobile:8105226626