ಸಮಾಜದ ಬಡವರ, ದೀನ ದಲಿತರ ಸಹಾಯಾರ್ಥ ಈ ಕಾರ್ಯಕ್ರಮ ಆಯೋಜಿಸಲಾಗಿದೆ. ಇದು ಯಶಸ್ವಿಯಾಗಲಿ, ಕಲಾವಿದರಿಗೂ ಪ್ರೋತ್ಸಾಹ ದೊರಕಲಿ ಎಂದು ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್ ಹೇಳಿದರು.


ಅವರು ನಗರದ ಬೆಂದೂರಿನ ಸಂತ ಆಗ್ನೆಸ್ ವಿಶೇಷ ಶಾಲೆಯ ಮೈದಾನದಲ್ಲಿ 27-01-19ರಂದು ಆಲ್ಪ್ರೆಡ್ ಬೆನ್ನಿಸ್ ಕ್ರಿಯೆಶನ್ಸ್ ವತಿಯಿಂದ ನಡೆದ ಹೋಪ್ ಸೇವಾ ಸಂಸ್ಥೆಯ ಸಹಾಯಾರ್ಥ ನಡೆದ ಬಾಯ್ಲಾ ಶೋ ಸಂಗೀತ ರಸಮಂಜರಿ ಕಾರ್ಯಕ್ರಮದಲ್ಲಿ ಶುಭ ಹಾರೈಸಿ ಮಾತನಾಡುತ್ತಿದ್ದರು.

ಮುಖ್ಯ ಅತಿಥಿ ಎಂ ಸಿ ಸಿ ಬ್ಯಾಂಕ್ ಅಧ್ಯಕ್ಷ ಅನಿಲ್ ಲೋಬೊ ಬಾಯ್ಲಾ ಕೊಂಕಣಿಗರ ನೃತ್ಯ ಪ್ರಕಾರ. ಅದನ್ನು ಪ್ರಚುರಪಡಿಸಿದರೆ ಪ್ರಪಂಚದಾದ್ಯಂತ ತಲುಪಬಹುದು. ಈ ನಿಟ್ಟಿನಲ್ಲಿ ಮಾಂಡ್ ಸೊಭಾಣ್ ಸಂಸ್ಥೆಯ ಕೆಲಸ ಉಲ್ಲೇಖನೀಯ. ಎಂದು ಹೇಳಿದರು.

ವೇದಿಕೆಯಲ್ಲಿ ಕಾರ್ಯಕ್ರಮದ ಪ್ರಮುಖ ಪೋಷಕ ಆಲ್ವಿನ್ ಫೆರ್ನಾಂಡಿಸ್ ಸೌದಿ ಹಾಗೂ ಸಂಘಟಕ ಆಲ್ಫ್ರೆಡ್ ಬೆನ್ನಿಸ್ ಉಪಸ್ಥಿತರಿದ್ದರು. ಹೋಪ್ ಸಂಸ್ಥೆಯ ಡಾ. ವಿನ್ಸೆಂಟ್ ಕ್ರಾಸ್ತಾ ಧನ್ಯವಾದವನ್ನಿತ್ತರು. ಸಭಾ ಕಾರ್ಯಕ್ರಮವನ್ನು ಫೆಲಿಕ್ಸ್ ಮೊರಾಸ್ ಹಾಗೂ ಸಂಗೀತ ಸಂಜೆಯನ್ನು ಆಲ್ವಿನ್ ದಾಂತಿ ನಿರೂಪಿಸಿದರು.

ನಂತರ ಬಾಯ್ಲಾ ಸಂಗೀತ ಪ್ರಕಾರವನ್ನು ಪ್ರಚುರಪಡಿಸಲು ನಿರಂತರ ಶ್ರಮಿಸಿದ ಮಾಂಡ್ ಸೊಭಾಣ್ ಸಂಸ್ಥೆಯ ಗುರಿಕಾರ ಹಾಗೂ ಸಂಗೀತಗಾರ ವಿಶ್ವ ಕೊಂಕಣಿ ಕಲಾರತ್ನ ಬಿರುದಾಂಕಿತ ಎರಿಕ್ ಒಝೇರಿಯೊ ನೇತೃತ್ವದಲ್ಲಿ ಬಾಯ್ಲಾ ಹಾಡು-ಸಂಗೀತ ಹಾಗೂ ನೃತ್ಯ ಪ್ರದರ್ಶನ ನಡೆಯಿತು.

 

 

 

 

 

 

 

 

 

 

 

 

 

 

 

 

 

 

 

 

 

 

 

ಮೊದಲಿಗೆ ಚಾಫ್ರಾ ಡಿಕೋಸ್ತಾ ಬರೆದ ಶಿರಾಂಧಾರಿಚೊ ಪಾವ್ಸ್ ಗೀತೆಯನ್ನು ಎರಿಕ್ ಒಝೇರ್ / ಜೊಯ್ಸ್ ಒಝೇರ್ ದಂಪತಿಗಳು ಹಾಡಿ ಬಾಯ್ಲಾ ಸಂಜೆಗೆ ಆರಂಭ ನೀಡಿದರು. ನಂತರ ಯೇಗೊ ಮೇರಿ - ಯಶವಂತ್ ಡಿ ಎಸ್ (ಪ್ರಕಾಶ್ ಡಿಸೋಜ); ತುಂ ಸುರ್ಯೊ ದರ್ಯೊ - ಎಲ್ಯೆರ್ ತಾಕೊಡೆ (ಜೇಸನ್/ಸೋನಲ್); ಭಾಂಗಾರಾ ಸುಂರ್ಗಾರಾ - ಫ್ರೆಡ್ ಕುಮಾರ್ (ಎಡೋಲ್ಫ್ ಜಯತಿಲಕ್); ಸಾಂಡುನ್ ಗೆಲ್ಲ್ಯಾ ಚೆಡ್ಯಾ - ವಾಲ್ಟರ್ ದಾಂತಿಸ್ (ಝೀನಾ ಪಿರೇರಾ); ಕಿರಾಕ್ ಮೋಗ್ ಪೆರಾಚೊ - ವಾಲ್ಟರ್ ದಾಂತಿಸ್ (ಜೊಯ್ಲಿನ್/ಅರುಣ್); ಪೋರ್ ತಳ್ಯಾ ಕಡೆನ್ - ಜೊಸ್ಸಿ ಪಿಂಟೊ ಕಿನ್ನಿಗೊಳಿ (ಮ್ಯಾಕ್ಸಿಮ್ ಪಿರೇರಾ); ತುಜೆಂ ಘರ್ ಖಂಯ್ - ಜೊನ್ ಲೋಬೊ, ಕದ್ಳೆ (ಪ್ರಜೋತ್ ಡೆಸಾ); ಶೆಂಡೊ - ಚಾಫ್ರಾ (ಸುನಿಲ್ ಮೊಂತೇರೊ / ಝೀನಾ ಪಿರೇರಾ); ಸೆಜಾರ್ನಿಚೆಂ ಸುಣೆಂ - ಜೊರ್ಜಿ ಪೀಂತ್ ಆಯ್ಕೊಳ್ (ರೈನಾ/ಒಶಿನ್/ಲಿಶಾ); ಗುಲ್ಗುಲಿತ್ ಗಾಲಾಂಚೆರ್ - ಜಿಯೊ ಆಗ್ರಾರ್ (ಜೇಸನ್); ಭಾಗಿಂತ್ ಗಾವುಂಯಾಂ - ನವೀನ್ ಸುರತ್ಕಲ್ (ಅರುಣ್ ದಾಂತಿ/ ಕವಿತಾ); ವೆಂಗೆಂತ್ ಧರುಂ, ಕೆಸಾರ್ ಕಳೊ, ಹಾಡ್ ಜಾಕಿನಾ - ವಾಲ್ಟರ್ ದಾಂತಿಸ್ ಮತ್ತು ಚಾಫ್ರಾ (ಪ್ರಜೋತ್ ಡೆಸಾ); ಫೆಸ್ತಾ ಸಾಂತೆಕ್ - ಜೊರ್ಜಿ ಪಿಂಟೊ ಐಕಳ (ಜೇಸನ್/ಪ್ರಿತುಮಾ); ಪಾವ್ಶಿಲ್ಯಾ ದಿಸಾಂನಿ - ವಿಕಾಸ್ ಕಲಾಕುಲ್ (ರೊನಿ ಕ್ರಾಸ್ತಾ); ಅಂಬಿಲ್ - ಜೊರ್ಜಿ ಪಿಂಟೊ ಐಕಳ (ಡಿಯೆಲ್/ಒಲಿಟಾ/ಸೋನಿಯಾ); ಪುನ್ವೆ ಚಾಂದ್ನೆ - ಮೆಲ್ವಿನ್ ರೊಡ್ರಿಗಸ್ (ಅರುಣ್ ಡಿಸೋಜ); ಅಶಿಂ ಸಪ್ಣಾಂ - ಎಲ್ಯೆರ್ ತಾಕೊಡೆ (ಪ್ರಕಾಶ್ ಡಿಸೋಜ); ಜ್ಯಾಮ್ ಜಾಲೊಂ - ಮೆಲ್ವಿನ್ ರೊಡ್ರಿಗಸ್ (ಸುನಿಲ್ ಮೊಂತೇರೊ); ದೇವ್ ಬರೆಂ ಕರುಂ - ಎಲ್ಯೆರ್ ತಾಕೊಡೆ (ಪ್ರಜೋತ್ ಡೆಸಾ); ಶ್ರೀಲಂಕನ್ ಮೆಡ್ಲಿ - ಒಶಿನ್/ಲಿಶಾ; ಮೊಗಾಚಿ ಬಡಾಯ್ - ಜೊಸ್ಸಿ ಪಿಂಟೊ ಕಿನ್ನಿಗೋಳಿ (ಪ್ರಕಾಶ್ ಡಿಸೋಜ) ಹೀಗೆ 12 ಸಾಹಿತಿಗಳ ಗೀತೆಗಳಿಗೆ 22 ಗಾಯಕರು ದನಿಯಾದರು.

ನಾಚ್ ಸೊಭಾಣ್ ತಂಡವು ರಾಹುಲ್ ಪಿಂಟೊ ನೇತೃತ್ವದಲ್ಲಿ ಸ್ನೇಹಿತ್ ವಾಮಂಜೂರ್, ಡಿಯಾನಾ ಮೆಂಡೊನ್ಸಾ, ಸುಹೇಯ್ಲ್ ಡಿಸೋಜ, ವೆಲೆನಿ ಗೋವಿಯಸ್, ವರ್ಲಿನ್ ಗೋವಿಯಸ್, ಶೀತಲ್ ಅರುಣ್, ಫ್ರೆನಿ ಫೆರ್ನಾಂಡಿಸ್, ಲಿಯಾಂಡರ್ ರೊಡ್ರಿಗಸ್, ವಿಜಿತ್ ಸಿಕ್ವೇರಾ ಇವರ ತಂಡವು 8 ವೈವಿಧ್ಯಮಯ ನೃತ್ಯಗಳನ್ನು ಪ್ರಸ್ತುತಪಡಿಸಿತು.

ರೋಶನ್ ಕ್ರಾಸ್ತಾ (ಲೀಡ್ ಗಿಟಾರ್ ಇವರ ಮುಂದಾಳತ್ವದಲ್ಲಿ ಟ್ರಂಪೆಟ್ (ಉಮೇಶ್), ವಯೋಲಿನ್ (ಸುನಿಲ್ ಕುಮಾರ್), ಕೀಬೋರ್ಡ್ (ಸಂಜಯ್ ಆನಿ ಎಲ್ರೋನ್ ರೊಡ್ರಿಗಸ್), ಬಾಸ್ ಗಿಟಾರ್ (ಜೆರೊಮ್ ಕುವೆಲ್ಲೊ), ರಿದಮ್ ಗಿಟಾರ್ (ಆರ್ಥರ್), ಡ್ರಮ್ಸ್ (ಸಚಿನ್), ತಬ್ಲಾ (ದಾಮೋದರ್ ಕುಂಬ್ಳೆ) ಇವರು ಸಂಗೀತ ನುಡಿಸಿ ರಸಮಂಜರಿಗೆ ವಿಶೇಷ ಮೆರುಗು ಕೊಟ್ಟರು.

Home | About | NewsSitemap | Contact

Copyright ©2015 www.manddsobhann.org. Powered by

Mandd Sobhann
Kalaangann,
Makale, Shaktinagar,
Mangalore - 575016
Email: [email protected]
Mobile:8105226626