ಮಾಂಡ್ ಸೊಭಾಣ್ ತಿಂಗಳ ವೇದಿಕೆ ಸರಣಿಯ 207 ನೇ ಕಾರ್ಯಕ್ರಮವಾಗಿ ಕಲಾಕುಲ್ ನಾಟಕ ರೆಪರ್ಟರಿಯಿಂದ ಬುಡ್ತುಗೋಲ್ (ಜಲಪ್ರಳಯ) ನಾಟಕ 03.03.2019 ರಂದು ಪ್ರದರ್ಶನಗೊಂಡಿತು.
ಪ್ರಸಿದ್ಧ ಹಾಸ್ಯ ಕಲಾವಿದ ಜೆರಿ ರಸ್ಕಿನ್ಹಾ ಕಂಚಿನ ಗಂಟೆ ಬಾರಿಸುವ ಮೂಲಕ ತಿಂಗಳ ವೇದಿಕೆಯನ್ನು ಉದ್ಘಾಟಿಸಿದರು.
ಅರುಣ್ ರಾಜ್ ರೊಡ್ರಿಗಸ್ ಬರೆದು ನಿರ್ದೇಶಿಸಿದ ಈ ನಾಟಕದ ಸಹ ನಿರ್ದೇಶನ ವಿಕಾಸ್ ಕಲಾಕುಲ್ ಹಾಗೂ ಗುರುಮೂರ್ತಿ ವಿ.ಎಸ್., ನೀನಾಸಂ ಸಂಗೀತ ನೀಡಿದ್ದಾರೆ.