ಜಪಾನ್‍ಚ್ಯಾ ಯುಟ್ಸುನೋಮಿಯಾ ವಿಶ್ವವಿದ್ಯಾನಿಲಯಾಚ್ಯಾ (Utsunomiya) ವಿದ್ಯಾರ್ಥಿಂಚೊ ಏಕ್ ಪಂಗಡ್ ಭಾರತ್ ಭೆಟೆರ್ ಆಸುನ್, ತಾಣಿಂ ಕೊಂಕ್ಣಿ ಭಾಶೆ ಸಂಸ್ಕøತಾಯೆಚಿ ಗಿರೇಸ್ತ್‍ಕಾಯ್ ಜಾಣಾ ಜಾಂವ್ಕ್ ಕಲಾಂಗಣಾಕ್ 28-02-2020 ವೆರ್ ಭೆಟ್ ದಿಲಿ.
ಕೊಂಕಣಿ ಭಾಸ್, ಕಲಾ ಸಂಸ್ಕøತಾಯೆಚ್ಯೊ ವಿವಿಧತಾಯೊ, ವೆವೆಗ್ಳ್ಯಾ ಬೊಲಿಂವಿಶಿಂ ತಾಂಕಾಂ ಮಾಹೆತ್ ದಿಲಿ. ತಶೆಂಚ್ ಮಾಂಡ್ ಸೊಭಾಣಾನ್ ಚಲಯಿಲ್ಲೆ ವಿವಿಧ್ ಪ್ರಯೋಗ್, ಗಿನ್ನೆಸ್ ದಾಖ್ಲೊ, ಮ್ಹಯ್ನ್ಯಾಳಿ ಮಾಂಚಿ, ಎಂಸಿಸಿ ಬ್ಯಾಂಕ್ ಸೋದ್-5 ಮ್ಯಾಂಗೋವಾ ಟಿವಿ ರಿಯಾಲಿಟಿ ಶೋ, ಉಗ್ತೊ ರಂಗ್ ಮಾಂಚೊ, ವೊಣ್ತಿ ಶಿಲ್ಪಾಂ, ಶಿಲ್ಪಕಲಾ ಇಮಾಜಿ, ಗುಮ್ಟಾಂ ಆನಿ ಪದಾಂ ತಶೆಂಚ್ ವಸ್ತು ಸಂಗ್ರಹಾಲಯಾಂತ್ಲ್ಯಾ ವಸ್ತುಂವಿಶಿಂ ಮಾಹೆತ್ ದಿಲಿ.
ರೋಶನಿ ನಿಲಯಾಚ್ಯಾ ವಿಭಾಗ್ ಮುಕೇಸ್ತ್ ಡೊ. ಜೊಸ್ಲಿನ್ ಲೋಬೊಚ್ಯಾ ಮಾರ್ಗದರ್ಶನಾಖಾಲ್ ಆಯಿಲ್ಲ್ಯಾ ಹ್ಯಾ ಪಂಗ್ಡಾಂತ್ ಉಮಿ, ಚಿಕುಝಾನ್, ಅಝಾನಾ, ಎಮಿ ಆನಿ ಕಾನ ಆಸ್‍ಲ್ಲಿಂ. ಜಾಸ್ಮಿನ್ ಮಾರ್ಟಿಸ್ ಆನಿ ಡಯಾನಾ ಡಿಸೋಜ ಸಂವಹಕ್ ಜಾವ್ನಾಸ್‍ಲ್ಲಿಂ.
ಮಾಂಡ್ ಸೊಭಾಣ್ ಕಾರ್ಯದರ್ಶಿ ಕಿಶೋರ್ ಫೆರ್ನಾಂಡಿಸ್ ಲೋಕ್ ಸಂಪರ್ಕಾಧಿಕಾರಿ ವಿಕ್ಟರ್ ಮತಾಯಸ್ ತಶೆಂಚ್ ಸಮಿತಿ ಸಾಂದೆ ಜೈಸನ್ ಸಿಕ್ವೇರಾ ಆನಿ ಜಾಸ್ಮಿನ್ ಲೋಬೊನ್ ವಿವಿಧ್ ಮಾಹೆತ್ ದಿಲಿ.
ಕಲಾಂಗಣಕ್ಕೆ ಜಪಾನೀ ವಿದ್ಯಾರ್ಥಿಗಳ ಅಧ್ಯಯನ ಭೇಟಿ
ಜಪಾನಿನ ಯುಟ್ಸುನೋಮಿಯಾ ವಿಶ್ವವಿದ್ಯಾನಿಲಯದ (Utsunomiya) ವಿದ್ಯಾರ್ಥಿ ತಂಡವು ಭಾರತದಲ್ಲಿ ಅಧ್ಯಯನ ಪ್ರವಾಸ ಕೈಗೊಂಡಿದ್ದು, ಕೊಂಕಣಿ ಭಾಷೆ-ಸಂಸ್ಕøತಿಯ ಬಗ್ಗೆ ಅರಿಯಲು ಶಕ್ತಿನಗರದ ಕಲಾಂಗಣಕ್ಕೆ 28-02-2020 ರಂದು ಭೇಟಿ ನೀಡಿತು.
ಕೊಂಕಣಿಯ ಭಾಷೆ, ಕಲೆ, ಸಂಸ್ಕøತಿಯ ವಿವಿಧತೆಗಳು, ವಿವಿಧ ಭಾಷಾ ಪ್ರಭೇದಗಳ ಬಗ್ಗೆ ಮಾಹಿತಿ ನೀಡಲಾಯಿತು. ಮಾಂಡ್ ಸೊಭಾಣ್ ನಡೆಸಿದ ವಿವಿಧ ಕಲಾ ಪ್ರಯೋಗಗಳು, ಗಿನ್ನೆಸ್ ದಾಖಲೆ, ತಿಂಗಳ ವೇದಿಕೆಯಂತಹ ನಿರಂತರ ಕಾರ್ಯಕ್ರಮಗಳು, ಬಯಲು ರಂಗ ಮಂದಿರ, ಆವರಣ ಗೋಡೆಗಳಲ್ಲಿನ ಉಬ್ಬು ಶಿಲ್ಪಗಳು, ಏಕತಾ ಗೋಡೆಯಲ್ಲಿನ ಶಿಲ್ಪಕಲಾ ಪ್ರತಿಮೆಗಳು, ಗುಮಟ್ ಹಾಡುಗಳ ಬಗ್ಗೆ ಹಾಗೂ ವಸ್ತು ಸಂಗ್ರಹಾಲಯದಲ್ಲಿರುವ ವಸ್ತು ವಿಶೇಷಗಳ ಬಗ್ಗೆ ಮಾಹಿತಿ ನೀಡಲಾಯಿತು. ನಂತರ ವಿದ್ಯಾರ್ಥಿಗಳೊಡನೆ ಸಂವಾದ ನಡೆಯಿತು.
ರೋಶನಿ ನಿಲಯದ ವಿಭಾಗ ಮುಖ್ಯಸ್ಥರಾದ ಡಾ. ಜೊಸ್ಲಿನ್ ಲೋಬೊ ಮಾರ್ಗದರ್ಶನದಲ್ಲಿ ಆಗಮಿಸಿದ ಈ ಅಧ್ಯಯನ ತಂಡದಲ್ಲಿ ಉಮಿ, ಚಿಕುಝಾನ್, ಅಝಾನಾ, ಎಮಿ ಹಾಗೂ ಕಾನ ಇದ್ದರು. ಜಾಸ್ಮಿನ್ ಮಾರ್ಟಿಸ್ ಹಾಗೂ ಡಯಾನಾ ಡಿಸೋಜ ಸಂವಹಕರಾಗಿದ್ದರು.
ಮಾಂಡ್ ಸೊಭಾಣ್ ಕಾರ್ಯದರ್ಶಿ ಕಿಶೋರ್ ಫೆರ್ನಾಂಡಿಸ್ ಸಾರ್ವಜನಿಕ ಸಂಪರ್ಕಾಧಿಕಾರಿ ವಿಕ್ಟರ್ ಮತಾಯಸ್ ಹಾಗೂ ಸಮಿತಿ ಸದಸ್ಯರಾದ ಜೈಸನ್ ಸಿಕ್ವೇರಾ ಮತ್ತು ಜಾಸ್ಮಿನ್ ಲೋಬೊ ಮಾಹಿತಿ ನೀಡಿದರು.