Nov 02, 2017: Renowned Konkani Poet & Composer Lloyd Austin Rego, Taccode will be presenting a musical show of his selected songs – ‘LAR Nite’, at the 191st Monthly Theatre, on Sun., Nov. 5, 2017, at 6 p.m., at Kalaangann, Mangalore.
Eric Ozario, Joyce Ozario, Adolf Jayatilak, Shilpa Cutinha, Muralidhar Kamat, Robin Sequeira, Meera Crasta, Nihal Tauro, Herald Tauro, Senet D’Cunha, Nester Hospet and Joel Attur will be singing in this show and Rajesh, Rajendra, Roshan Bela, Muralidhar Kamat, Jonam Obol, Kenny Pereira and Reuben Machado will be backing them with music. There will also be comedy by Bindas Pernal and dances by Nach Sobhann. Lloyd Rego & Alwyn Danthy will be compeering the show. Blue Angels will be presenting an acapella version of one of Lloyd’s songs.
On this occasion, the 13th Carvalho Ghorannem–Mandd Sobhann ‘Kalakar Puraskar’ will be awarded to Shri Gopal Gowda, for his immense contribution in the preservation, promotion and the popularization of Kudmi Konkani folk arts. The President of the Karnataka Konkani Sahitya Academy, Shri R. P. Naik, will be presenting the Award.
All are invited. Entry free.
ಪತ್ರಿಕಾ ಪ್ರಕಟಣೆ : 191ನೇ ತಿಂಗಳ ವೇದಿಕೆ
---------
ರವಿವಾರ, ನವೆಂಬರ್ 5, 2017ರಂದು, ಸಂಜೆ 6 ಗಂಟೆಗೆ, ಕಲಾಂಗಣ, ಮಂಗಳೂರಿನಲ್ಲಿ ನಡೆಯುವ 191ನೇ ತಿಂಗಳ ವೇದಿಕೆ ಕಾರ್ಯಕ್ರಮದಲ್ಲಿ, ಪ್ರಸಿದ್ಧ ಕವಿ ಹಾಗೂ ಪದ್ಯ ರಚನಾಕಾರ ಲೊಯ್ಡ್ ಆಸ್ಟಿನ್ ರೇಗೊ, ತಾಕೊಡೆ ಇವರ ಸಂಗೀತ ಕಾರ್ಯಕ್ರಮ ಸಾದರಪಡಿಸಲಾಗುವುದು.
ಎರಿಕ್ ಒಝೇರಿಯೊ, ಜೊಯ್ಸ್ ಒಝೇರಿಯೊ, ಅಡೋಲ್ಫ್ ಜಯತಿಲಕ್, ಶಿಲ್ಪಾ ಕುಟಿನ್ಹಾ, ಮುರಳೀಧರ್ ಕಾಮತ್, ರೊಬಿನ್ ಸಿಕ್ವೇರಾ, ಮೀರಾ ಕ್ರಾಸ್ತಾ, ನಿಹಾಲ್ ತಾವ್ರೊ, ಹೆರಾಲ್ಡ್ ತಾವ್ರೊ, ಸೆನೆಟ್ ಡಿ’ಕುನ್ಹಾ, ನೆಸ್ಟರ್ ಹೊಸ್ಪೆಟ್ ಹಾಗೂ ಜೊಯೆಲ್ ಅತ್ತೂರ್ ಈ ಕಾರ್ಯಕ್ರಮದಲ್ಲಿ ಹಾಡಲಿರುವರು. ರಾಜೇಶ್, ರಾಜೇಂದ್ರ, ರೋಶನ್ ಬೆಳಾ, ಮುರಳೀಧರ್ ಕಾಮತ್, ಜೊನಾಮ್ ಒಬೊಲ್, ಕೆನ್ನಿ ಪಿರೇರಾ ಹಾಗೂ ರೂಬನ್ ಮಚಾದೊ ಸಂಗೀತ ನೀಡುವರು. ಬಿಂದಾಸ್ ಪೆರ್ನಾಲ್ ತಂಡದಿಂದ ಹಾಸ್ಯವಿದ್ದು, ನಾಚ್ ಸೊಭಾಣ್ ತಂಡದಿಂದ ನೃತ್ಯವಿರುವುದು. ಲೊಯ್ಡ್ ರೇಗೊ ಹಾಗೂ ಆಲ್ವಿನ್ ದಾಂತಿ ಕಾರ್ಯನಿರ್ವಹಣೆ ಮಾಡುವರು. ಬ್ಲೂ ಏಂಜಲ್ಸ್ ತಂಡ ಲೊಯ್ಡ್‍ರವರ ಒಂದು ಪದ್ಯವನ್ನು ಅಕಾಪೆಲ್ಲಾ ಶಯ್ಲಿಯಲ್ಲಿ ಸಾದರಪಡಿಸಲಿರುವುದು.
ಇದೇ ಸಂದರ್ಭದಲ್ಲಿ, ಶ್ರೀ ಗೋಪಾಲ್ ಗೌಡ ಇವರು ಕುಡ್ಮಿ ಕೊಂಕಣಿ ಜಾನಪದ ಕಲೆಯನ್ನು ಉಳಿಸಲು, ಬೆಳೆಸಲು ಹಾಗೂ ಜನಪ್ರೀಯಗೊಳಿಸಲು ನೀಡಿದ ಅಪಾರ ಕೊಡುಗೆಗಾಗಿ ಅವರನ್ನು 13ನೇ ಕಾರ್ವಾಲ್ ಘರಾಣೆಂ-ಮಾಂಡ್ ಸೊಭಾಣ್ ‘ಕಲಾಕಾರ್ ಪುರಸ್ಕಾರ್’ ನೀಡಲಾಗುವುದು. ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಶ್ರೀ ಆರ್. ಪಿ. ನಾಯ್ಕ್ ಇವರು ಪುರಸ್ಕಾರ ಪ್ರದಾನ ಮಾಡುವರು.
ಎಲ್ಲರಿಗೂ ಆದರದ ಸ್ವಾಗತ. ಪ್ರವೇಶ ಉಚಿತ.