7.7.19 ವೆರ್ ಕಲಾಂಗಣಾಂತ್ 211 ವಿ ಮ್ಹಯ್ನ್ಯಾಳಿ ಮಾಂಚಿ ಸಾದರ್ ಜಾಲಿ. ಸಂಗೀತ್ ಶೆತಾಂತ್ಲೊ ನಾಂವಾಡ್ತೊ ಮಾನ್ ಮನಿಸ್ ಅನಿಲ್ ಪತ್ರಾವೊನ್ ಘಾಂಟ್ ವ್ಹಾಜೊವ್ನ್ ಕಾರ್ಯಾಕ್ ಚಾಲನ್ ದಿಲೆಂ. ವೆದಿರ್ ಎರಿಕ್ ಒಝೇರಿಯೊ ಆನಿ ಲುವಿ ಪಿಂಟೊ ಆಸ್‍ಲ್ಲೆ.
ಉಪ್ರಾಂತ್ ಸಾಂ ಫ್ರಾನ್ಸಿಸ್ ಆಸ್ಸಿಸಿ ಕಲಾಮೇಳ್ ಹೊನ್ನಾವರ್ ಹ್ಯಾ ಪಂಗ್ಡಾ ಥಾವ್ನ್ `ಬಾಂದ್ಪಾಸಾಂತ್ಲಿ ಬಚಾವಿ’ ತಿಯಾತ್ರ್ ಸಾದರ್ ಜಾಲೊ. ಹೊ ತಿಯಾತ್ರ್ ಜೇಮ್ಸ್ ಲೋಪಿಸ್ ಹೊನ್ನಾವರ್ ಹಾಣೆಂ ಬರೊವ್ನ್, ಸುರೇಶ್ ಲೋಪಿಸಾನ್ ನಿರ್ದೇಶನ್ ದಿಲ್ಲೆಂ. ಮದರ್ ತೆರೆಜಾ ಸಂಗೀತ್ ಪಂಗಡ್ ಹೊನ್ನಾವರ್ ಹಾಣಿ ಸಂಗೀತ್ ದಿಲ್ಲೆಂ.
ಕಲಾಂಗಣ : 211 ನೇ ತಿಂಗಳ ವೇದಿಕೆಯಲ್ಲಿ ತಿಯಾತ್ರ್
ಮಂಗಳೂರಿನ ಶಕ್ತಿನಗರದ ಕಲಾಂಗಣದಲ್ಲಿ ಮಾಂಡ್ ಸೊಭಾಣ್ ಪ್ರಾಯೋಜಿತ 211ನೇ ತಿಂಗಳ ವೇದಿಕೆ ಕಾರ್ಯಕ್ರಮ 07.07.2019 ರಂದು ನಡೆಯಿತು.
ಕೊಂಕಣಿ ಸಂಗೀತಗಾರ ಮತ್ತು ತರಬೇತುದಾರ ಅನಿಲ್ ಪತ್ರಾವೊ ಘಂಟೆ ಬಾರಿಸಿ ಕಾರ್ಯಕ್ರಮ ಉದ್ಘಾಟಿಸಿದರು. ಗುರಿಕಾರ ಎರಿಕ್ ಒಝೇರಿಯೊ ಮತ್ತು ಅಧ್ಯಕ್ಷ ಲುವಿ ಪಿಂಟೊ ಉಪಸ್ಥಿತರಿದ್ದರು.
ನಂತರ ಹೊನ್ನಾವರದ ಸಂತ ಫ್ರಾನ್ಸಿಸ್ ಆಸ್ಸಿಸಿ ಕಲಾ ತಂಡದಿಂದ ಬಾಂದ್ಪಾಸಾಂತ್ಲಿ ಬಚಾವಿ ಎಂಬ ತಿಯಾತ್ರ್ ನಡೆಯಿತು. ಜೇಮ್ಸ್ ಲೋಪಿಸ್ ರಚಿಸಿ, ಸುರೇಶ್ ಲೋಪಿಸ್ ನಿರ್ದೇಶಿಸಿದ ಈ ತಿಯಾತ್ರ್‍ಗೆ ಮದರ್ ತೆರೆಜಾ ತಂಡ ಸಂಗೀತ ನೀಡಿತ್ತು.
ತಿಯಾತ್ರ್ ಎಂದರೆ ಸುಮಾರು 127 ವರ್ಷಗಳ ಇತಿಹಾಸ ಇರುವ, ಗೋವಾದಲ್ಲಿ ಪ್ರಸಿದ್ಧವಾಗಿರುವ ಕೊಂಕಣಿಯ ಒಂದು ರಂಗ ಪ್ರಕಾರ.