ಮಂಗಳೂರಿನ ಕಲಾಂಗಣದಲ್ಲಿ, 6.10.19 ರಂದು, 214 ನೇ ತಿಂಗಳ ವೇದಿಕೆ ಕಾರ್ಯಕ್ರಮದಲ್ಲಿ ಮಾಂಡ್ ಸೊಭಾಣ್ ಗಾಯನ ಮಂಡಳಿ ಸುಮೇಳ್ ವತಿಯಿಂದ ಅಂತರಾಷ್ಟ್ರೀಯ ಸಂಗೀತ ದಿನಾಚರಣೆ ನಡೆಯಿತು.
ಆರಂಭದಲ್ಲಿ ಇತ್ತೀಚೆಗೆ ದೈವಾಧೀನರಾದ ಜೆರಿ ಬಜ್ಜೋಡಿ, ಗೋಪಾಲ ಗೌಡ ಮತ್ತು ಹೆರಿ ಬೊಯ್ ಈ ಕಲಾವಿದರ ಸ್ಮರಣೆ ಮಾಡಿ ಶ್ರದ್ದಾಂಜಲಿ ಸಮರ್ಪಿಸಲಾಯಿತು.
ಐವತ್ತು ವರ್ಷಗಳಿಂದ ಸಂಗೀತ ವಾದ್ಯಗಳ ದುರಸ್ತಿಯಲ್ಲಿ ಪರಿಣತರಾದ ಉಡುಪಿ-ಮಲ್ಪೆಯ ಡೊನಾಲ್ಡ್ ಡಿಸಿಲ್ವಾ ಹಾಗೂ ರೊನಾಲ್ಡ್ ಡಿಸಿಲ್ವಾ ಅವಳಿ ಸೋದರರನ್ನು `ವಾದ್ಯ ವಿಶಾರದ’ ಬಿರುದು ನೀಡಿ, ಜಾಗತಿಕ ಕೊಂಕಣಿ ಸಂಘಟನೆಯ ನೂತನ ಅಧ್ಯಕ್ಷರಾದ ಜೊಯ್ ಫೆರ್ನಾಂಡಿಸ್, ಗೋವಾ ಇವರು ಸನ್ಮಾನಿಸಿದರು.
ಕಲಾವಿದರು, ಮಾಂಡ್ ಸೊಭಾಣ್ ಅಭಿಮಾನಿಗಳು ನೀಡಿದ ಒಂದು ಲಕ್ಷ ರೂಪಾಯಿಯ ಚೆಕ್ಕನ್ನು ದಿ. ಜೆರಿ ಬಜ್ಜೋಡಿಯವರ ಪತ್ನಿ ಲವೀನಾ ಡಿಸೋಜ ಇವರಿಗೆ ಸುಮೇಳ್ ಸಂಯೋಜಕ ಸುನೀಲ್ ಮೊಂತೇರೊ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಜೊಯ್‍ಫುಲ್ ಬೀಟ್ಸ್ ನಿರ್ಮಿಸಿದ, ಜೆರಿ ಬಜ್ಜೋಡಿ ಅವರ `ಯೇ ಘರಾ ಕುಳಾರಾ’ ಸಿಡಿಯನ್ನು, ಎರಿಕ್ ಒಝೇರಿಯೊ ಲೊಕಾರ್ಪಣೆಗೊಳಿಸಿದರು.
ವೇದಿಕೆಯಲ್ಲಿ ಲುವಿ ಪಿಂಟೊ, ಐರಿನ್ ರೆಬೆಲ್ಲೊ, ಕವಿತಾ ಜೊರ್ಜ್ ಉಪಸ್ಥಿತರಿದ್ದರು.
ನಂತರ ಮಕ್ಕಳು, ಯುವ ಗಾಯಕರು, ಹಿರಿಯ ಕಲಾವಿದರನ್ನೊಳಗೊಂಡ ತಂಡದಿಂದ `ಸಂಗೀತ್ ಸಂಸಾರ್’ ಕಾರ್ಯಕ್ರಮ ನಡೆಯಿತು. ಅಮೊರಾ ಮೊಂತೇರೊ ಕಾರ್ಯಕ್ರಮ ನಿರೂಪಿಸಿದರು.
214 ವ್ಯಾ ಮ್ಹಯ್ನ್ಯಾಳ್ಯಾ ಮಾಂಚಿಯೆರ್ ಸಾಧಕಾಂಕ್ ಸನ್ಮಾನ್ ಆನಿ ಸಂಗೀತ್ ಸಂಸಾರ್
06.10.19 ವೆರ್ ಕಲಾಂಗಣಾಂತ್ 214 ವಿ ಮ್ಹಯ್ನ್ಯಾಳಿ ಮಾಂಚಿ ಜಾವ್ನ್ ಅಂತರಾಷ್ಟ್ರೀಯ್ ಸಂಗೀತ್ ದಿವಸ್ ಆಚರಣ್ ಕೆಲೊ. ಸುರ್ವೆರ್ ಆಯ್ಲೆವಾರ್ಚ್ಯಾ ದಿಸಾಂನಿ ದೆವಾಧಿನ್ ಜಾಲ್ಲ್ಯಾ ಜೆರಿ ಬಜ್ಜೋಡಿ, ಗೋಪಾಲ ಗೌಡ ಆನಿ ಹೆರಿ ಬೊಯ್ ಹಾಂಕಾಂ ಶ್ರದ್ಧಾಂಜಲಿ ಅರ್ಪಿಲಿ.
ಹ್ಯಾ ವೆದಿರ್ ಜೊಯ್‍ಫುಲ್ ಬೀಟ್ಸ್ ಹಾಣಿಂ ತಯಾರ್ ಕೆಲ್ಲಿ, ಜೆರಿ ಬಜ್ಜೋಡಿ ಹಾಚಿ ಯೇ ಘರಾ ಕುಳಾರಾ ಸಿಡಿ, ಎರಿಕ್ ಒಝೇರಿಯೊನ್ ಲೊಕಾರ್ಪಣ್ ಕೆಲಿ.
ಹ್ಯಾಚ್ ವೆಳಿಂ ಸುಮೇಳಾನ್, ಮಾಂಡ್ ಸೊಭಾಣ್, 214 ವ್ಯೆ ಮ್ಹಯ್ನ್ಯಾಳ್ಯೆ ಮಾಂಚಿಯೆಚೆ ಕಲಾಕಾರ್ ಆನಿ ಸಂಗೀತ್‍ಗಾರ್ ತಶೆಂಚ್ ಹೆರ್ ಅಭಿಮಾನಿಂಚ್ಯಾ ಸಹಕಾರಾನ್, ಜೆರಿ ಬಜ್ಜೊಡಿಚ್ಯಾ ಸ್ಮರಣಾರ್ಥ್ ಜಮಯಿಲ್ಲೊ ರು. ಏಕ್ ಲಾಖ್ ಲವೀನಾ ಡಿಸೋಜ ಹಿಕಾ, ಸಮೇಳ್ ಸಮನ್ವಯಿ ಸುನೀಲ್ ಮೊಂತೇರೊನ್ ಹಾತಾಂತರ್ ಕೆಲೊ.
ಸಂಗೀತ್ ವ್ಹಾಜಾಂತ್ರಾಂ ದುರಸ್ತಿಂತ್ ನಿಪುಣ್ ರೊನಾಲ್ಡ್ ಆನಿ ಡೊನಾಲ್ಡ್ ಡಿಸಿಲ್ವಾ ಭಾವಾಂಕ್ `ವಾದ್ಯ ವಿಶಾರದ’ ಬಿರುದ್ ದೀವ್ನ್, ಜಾಗತಿಕ್ ಕೊಂಕ್ಣಿ ಸಂಘಟನಾಚೊ ನವೊ ಅಧ್ಯಕ್ಷ್ ಜೊಯ್ ಫೆರ್ನಾಂಡಿಸ್, ಗೊಂಯ್ ಹಾಣೆಂ ಸನ್ಮಾನ್ ಕೆಲೊ.
ವೆದಿರ್ ಲುವಿ ಪಿಂಟೊ, ಐರಿನ್ ರೆಬೆಲ್ಲೊ, ಕವಿತಾ ಜೊರ್ಜ್ ಹಾಜರ್ ಆಸ್‍ಲ್ಲಿಂ.
ಉಪ್ರಾಂತ್ ಭುರ್ಗಿಂ, ಯುವಜಣಾಂ ಆನಿ ಮ್ಹಾಲ್ಗಡ್ಯಾ ಕಲಾಕಾರಾಂಚ್ಯೆ ಮೆಳಿಂತ್ `ಸಂಗೀತ್ ಸಂಸಾರ್’ ಕಾರ್ಯೆಂ ಸಾದರ್ ಜಾಲೆಂ. ಆಮೊರಾ ಮೊಂತೇರೊನ್ ಕಾರ್ಯೆಂ ಚಲಯ್ಲೆಂ.