Aug 5, 2016: Mandd Sobhann has organised a State Level ‘Cement Shilpakala Camp’ at Kalaangann, from July 25 to Aug. 7, 2016, in association with Karnataka Shilpakala Academy (Govt. of Karnataka).
15 life-size cement statues depicting various Konkani communities have been created by 20 artisans sent by the Shilpakala Academy, at Kalaangann. These statues will be unveiled on Sun., Aug. 7, 2016, at 5 p.m., and will be installed permanently at Kalaangann for display.
Shri Ivan D’Souza, MLC & Chief Whip – Karnataka Legislative Council, will be unveiling the statues. Shri Mahadevappa Shambhulingappa Shilpi, the President of Karnataka Shilpakala Academy will preside over the programme. Shri Roy Castelino, the President of Karnataka Konkani Sahitya Academy will be present as the Chief Guest and Shri Louis J. Pinto, the President of Mandd Sobhann and Ms. Indramma H. V., the Registrar of Karnataka Shilpakala Academy will also be present.
All are cordially invited.
--------------------------------------------------------------------------------------------------------
ಪತ್ರಿಕಾ ಪ್ರಕಟಣೆ : ಕಲಾಂಗಣದಲ್ಲಿ ‘ಸಿಮೆಂಟ್ ಶಿಲ್ಪಕಲಾ’ ಅನಾವರಣ
ಮಾಂಡ್ ಸೊಭಾಣ್, ಕರ್ನಾಟಕ ಶಿಲ್ಪಕಲಾ ಅಕಾಡೆಮಿ (ಕರ್ನಾಟಕ ಸರಕಾರ) ಇವರ ಸಹಯೋಗದಿಂದ, ಕಲಾಂಗಣದಲ್ಲಿ, 2016 ಜುಲೈ 25ರಿಂದ ಅಗಸ್ಟ್ 7ರ ವರೆಗೆ, ರಾಜ್ಯಮಟ್ಟದ ‘ಸಿಮೆಂಟ್ ಶಿಲ್ಪಕಲಾ ಶಿಬಿರ’ವನ್ನು ಹಮ್ಮಿಕೊಂಡಿದೆ.
ಕೊಂಕಣಿಯ ವಿವಿಧ ಸಮುದಾಯಗಳನ್ನು ಪ್ರತಿಬಿಂಬಿಸುವ ಜೀವ-ಗಾತ್ರದ (life-size) 15 ಸಿಮೆಂಟ್ ಶಿಲ್ಪಗಳನ್ನು, ಶಿಲ್ಪಕಲಾ ಅಕಾಡೆಮಿ ಕಳುಹಿಸಿದ 20 ಶಿಲ್ಪಿಗಳು, ನಿರ್ಮಿಸಿದ್ದಾರೆ. ಈ ಶಿಲ್ಪಗಳನ್ನು ರವಿವಾರ, ಅಗಸ್ಟ್ 7, 2016ರಂದು, ಸಂಜೆ 5 ಗಂಟೆಗೆ, ಅನಾವರಿಸಿ, ಕಲಾಂಗಣದಲ್ಲ್ಲಿ ಶಾಶ್ವತವಾಗಿ ಇರಿಸಿ, ಪ್ರದರ್ಶಿಸಲಾಗುವುದು.
ಶ್ರೀ ಐವನ್ ಡಿಸೋಜ, ವಿಧಾನ ಪರಿಷತ್ ಸದಸ್ಯರು ಹಾಗೂ ಸರಕಾರದ ಮುಖ್ಯ ಸಚೇತಕರು, ಶಿಲ್ಪಿಗಳನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಿರುವರು. ಶ್ರೀ ಮಹಾದೇವಪ್ಪ ಶಂಭುಲಿಂಗಪ್ಪ ಶಿಲ್ಪಿ, ಅಧ್ಯಕ್ಷರು – ಕರ್ನಾಟಕ ಶಿಲ್ಪಕಲಾ ಅಕಾಡೆಮಿ, ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು; ಶ್ರೀ ರೊಯ್ ಕ್ಯಾಸ್ತೆಲಿನೊ, ಅಧ್ಯಕ್ಷರು – ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ, ಮುಖ್ಯ ಅತಿಥಿಗಳಾಗಿರುವರು ಹಾಗೆಯೇ ಶ್ರೀ ಲುವಿ ಜೆ. ಪಿಂಟೊ, ಅಧ್ಯಕ್ಷರು – ಮಾಂಡ್ ಸೊಭಾಣ್ ಹಾಗೂ ಶ್ರೀಮತಿ ಇಂದ್ರಮ್ಮಾ ಹೆಚ್. ವಿ. – ರಿಜಿಸ್ಟ್ರಾರ್, ಕರ್ನಾಟಕ ಶಿಲ್ಪಕಲಾ ಅಕಾಡೆಮಿ, ಹಾಜರಿರುವರು.
ಎಲ್ಲರಿಗೂ ಆದರದ ಸ್ವಾಗತ.
--------------------------------------------------------------------------------------------------------