Sep 5, 2016: The first play of Kalakul’s 2016-17 batch – ‘Paying Guest’ was presented at the 177th Monthly Theatre, on Sun., Sep. 4, 2016, at Kalaangann, Mangalore.

This comedy play was written by Arun Raj Rodrigues and displayed the incidents that occur in houses that offer Paying Guest facility. Christopher D’Souza, Neenasam directed the play while Alron Rodrigues provided music. Swarna Rita Veigas, Rohan Jacob D’Souza, Frivita D’Souza, Flavia Rodrigues, Vikas Preetham Lasrado, Sheldon Tauro and Jackson D’Cunha enacted.

 

 

 

 

 

Prior to the play, ‘Ho Jeev’ the debut music album of Jaison J. Sequeira was released. Rev. Fr. Antony Lobo, Parish Priest of Gurpur released the CD and ‘Vishwa Konkani Kala Ratn’ Eric Ozario released the music cards. All tunes and lyrics have been composed by Jaison J. Sequeira himself and Roshan D’Souza Angelore has arranged the music for this album.

The members of Kalakul & Mandd Sobhann, who had acted in the Konkani movie – ‘Noshibacho Khell’ were also honoured on the occasion. Arun Raj Rodrigues compered the programme.

 

 

 

 

 

 

177ನೇ ತಿಂಗಳ ವೇದಿಕೆ – ವರದಿ
---------

ಕಲಾಕುಲ್ ರೆಪರ್ಟರಿಯ 2016-17ನೇ ಪಂಗಡದ ಪ್ರಥಮ ನಾಟಕ ‘ಪೇಯಿಂಗ್ ಗೆಸ್ಟ್’, ರವಿವಾರ, ಸಪ್ಟೆಂಬರ್ 4, 2016ರಂದು, ಕಲಾಂಗಣ್, ಮಂಗಳೂರು, ಇಲ್ಲ್ಲಿ 177ನೇ ತಿಂಗಳ ವೇದಿಕೆಯಲ್ಲಿ ಪ್ರದರ್ಶಿಸಲಾಯಿತು.

 

 

 

 

ಪೇಯಿಂಗ್ ಗೆಸ್ಟ್ ವ್ಯವಸ್ಥೆ ಇರುವ ಮನೆಗಳಲ್ಲಿ ನಡೆಯುವ ಘಟನೆಗಳನ್ನು ಅರುಣ್ ರಾಜ್ ರೊಡ್ರಿಗಸ್ ಬರೆದಿರುವ ಈ ಹಾಸ್ಯ ನಾಟಕದಲ್ಲಿ ನೋಡಬಹುದಾಗಿದೆ. ಕ್ರಿಸ್ಟೋಫರ್ ಡಿಸೋಜ ನೀನಾಸಂ ಈ ನಾಟಕವನ್ನು ನಿರ್ದೇಶಿಸಿದ್ದಾರೆ ಹಾಗೂ ಆ್ಯಲ್ರೊನ್ ರೊಡ್ರಿಗಸ್ ಸಂಗೀತ ನೀಡಿದ್ದಾರೆ. ಈ ನಾಟಕದ ಪಾತ್ರಧಾರಿಗಳು - ಸ್ವರ್ಣಾ ರೀಟಾ ವೇಗಸ್, ರೋಹನ್ ಜೇಕಬ್ ಡಿಸೋಜ, ಫ್ರಿವಿಟಾ ಡಿಸೋಜ, ಫ್ಲಾವಿಯಾ ರೊಡ್ರಿಗಸ್, ವಿಕಾಸ್ ಪ್ರೀತಮ್ ಲಸ್ರಾದೊ, ಶೆಲ್ಡನ್ ತಾವ್ರೊ ಹಾಗೂ ಜ್ಯಾಕ್ಸನ್ ಡಿಕುನ್ಹಾ.  

 

 

ನಾಟಕ ಪ್ರದರ್ಶನದ ಮೊದಲು, ಜೇಸನ್ ಜೆ. ಸಿಕ್ವೇರಾ ಇವರ ಪ್ರಥಮ ಸಂಗೀತ ಆ್ಯಲ್ಬಮ್, ‘ಹೊ ಜೀವ್’, ಲೋಕಾರ್ಪಣ ಕಾರ್ಯಕ್ರಮ ನಡೆಸಲಾಯಿತು. ಗುರ್ಪುರ್ ಚರ್ಚ್‍ನ ಗುರುಗಳಾದ ವಂ| ಫಾ| ಆ್ಯಂಟನಿ ಲೋಬೊ ಸಿ.ಡಿ. ವಿಮೋಚನೆ ಮಾಡಿದರು ಹಾಗೂ ‘ವಿಶ್ವ್ ಕೊಂಕಣಿ ಕಲಾ ರತ್ನ್’ ಎರಿಕ್ ಒಝೇರಿಯೊ ಈ ಆ್ಯಲ್ಬಮ್‍ನ ಮ್ಯೂಸಿಕ್ ಕಾರ್ಡ್ ವಿಮೋಚಿಸಿದರು. ಈ ಆ್ಯಲ್ಬಮ್‍ನ ಎಲ್ಲಾ ಹಾಡುಗಳನ್ನು ಜೇಸನ್ ಜೆ. ಸಿಕ್ವೇರಾ ಬರೆದು ಸಂಗೀತ ರಚಿಸಿದ್ದಾರೆ ಮತ್ತು ರೋಶನ್ ಡಿಸೋಜ ಆಂಜೆಲೊರ್ ಸಂಗೀತ ಸಂಯೋಜಿಸಿದ್ದಾರೆ.  

ಇದೇ ಸಂದರ್ಭದಲ್ಲಿ ‘ನಶಿಬಾಚೊ ಖೇಳ್’ ಚಲನಚಿತ್ರದಲ್ಲಿ ನಟಿಸಿದ ಕಲಾಕುಲ್ ಹಾಗೂ ಮಾಂಡ್ ಸೊಭಾಣ್ ಸದಸ್ಯರನ್ನು ಸನ್ಮಾನಿಸಲಾಯಿತು. ಅರುಣ್ ರಾಜ್ ರೊಡ್ರಿಗಸ್ ಕಾರ್ಯಕ್ರಮ ನಿರೂಪಿಸಿದರು.

---------------

Home | About | NewsSitemap | Contact

Copyright ©2015 www.manddsobhann.org. Powered by

Mandd Sobhann
Kalaangann,
Makale, Shaktinagar,
Mangalore - 575016
Email: [email protected]
Mobile:8105226626